ವಿವಾದಕ್ಕೆ ನಾಂದಿಯಾಗಲಿದೆಯೇ ವಿವಾದಿತ ವ್ಯಕ್ತಿಯ ಆಹ್ವಾನ

ಉಡುಪಿ: ಫೆ.11 ಮತ್ತು 12 ರಂದು ಉಡುಪಿಯ ಎಂ ಜಿ ಎಂ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ಕನ್ನಡ ಮತ್ತು ಸಂಸೃತಿ ಇಲಾಖೆ ಆಶ್ರಯದಲ್ಲಿ ನಡೆಯಲಿದೆ.ಸರಕಾರ ಇದಕ್ಕಾಗಿ 2 ಕೋಟಿ ರೂ. ಗಳ ಅನುದಾನವನ್ನೂ ನೀಡಿದೆ. ಸಮ್ಮೇಳನದ ಸಿದ್ದತೆಗಳು ಭರದಿಂದ ಸಾಗುತ್ತಿರುವಂತೆ ವಿವಾದವೊಂದು ತಲೆಯೆತ್ತುವ ಎಲ್ಲಾ ಲಕ್ಷಣಗಳು ಕಾಣತೊಡಗಿದೆ. ಫೆ.11ರಂದು ನಡೆಯಲಿರುವ ಗೋಷ್ಠಿಯೊಂದರ ದಿಕ್ಸೂಚಿ ಭಾಷಣಕಾರರಾಗಿ ರೋಹಿತ್‌ ಚಕ್ರ ತೀರ್ಥ ಅವರನ್ನು ಆಹ್ವಾನಿಸಲಾಗಿದ್ದು, ಕರಾವಳಿಯಲ್ಲಿ ಸಾವಿರಾರು ಹಿರಿಯ ಯಕ್ಷಗಾನ ಕಲಾವಿದರಿರುವಾಗ ಅವರನ್ನೆಲ್ಲ ಬದಿಗಿಟ್ಟು ವಿವಾದಿತ ವ್ಯಕ್ತಿಯನ್ನು ಆಹ್ವಾನಿಸಿದ್ದು ಯಕ್ಷಗಾನದ ದಿಗ್ಗಜರಲ್ಲಿ ಅಸಮಾಧಾನ ಮೂಡಿಸಿದೆ. ಆದರೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕ ರಘುಪತಿ ಭಟ್‌ ಈ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here