ನೆಕ್ಲೆಸ್‌ ಕದ್ದ ಮೂಷಿಕ… ಬೆರಗಾದ ಮಾಲೀಕ

ಪ್ರತಿಭೆ ಮತ್ತು ಸೃಜನ ಶೀಲತೆಯನ್ನು ಸರಿಯಾದ ದಾರಿಯಲ್ಲಿ ಬಳಸಿದರೆ ಬದುಕು ನಂದನವನವಾಗುತ್ತದೆ. ಇದೇ ಪ್ರತಿಭೆಗಳನ್ನು ವಾಮಮಾರ್ಗದಲ್ಲಿ ಬಳಸಿದರೆ ಕಷ್ಟಗಳು ಮನೆ ಬಾಗಿಲಿನ ಮುಂದಿರುತ್ತದೆ. ಧಿಡೀರ್‌ ಶ್ರೀಮಂತಿಕೆಯ ಹುಚ್ಚು, ದುಡಿಯದೆ ಹಣ ಮಾಡಬೇಕೆಂಬ ಆಸೆಯಿಂದ ಕಳ್ಳತನಕ್ಕೆ ತೊಡಗಿ ಸಂಕಷ್ಟವನ್ನು ಮೈಮೇಲೆ ಎಳೆದು ಕೊಳ್ಳುತ್ತಾರೆ. ಕೆಲವೊಮ್ಮೆ ಕಳ್ಳರು ಬಳಸುವ ಟೆಕ್ನಿಕ್‌ ಆಶ್ಚರ್ಯವನ್ನುಂಟು ಮಾಡುತ್ತದೆ. ಕ್ರಿಯೇಟಿವ್‌ ಕಳ್ಳರಿಗೆ ಸಿಸಿ ಟಿವಿ ಒಂದರ್ಥದಲ್ಲಿ ಕಡಿವಾಣ ಹಾಕಿದೆ.ಆದರೂ ಸಿಸಿ ಟಿವಿಯ ಕಣ್ತಪ್ಪಿಸಿ ಕದಿಯುವ ಕಳ್ಳರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಇಲ್ಲೊಬ್ಬ ಕಳ್ಳ ಸಿಸಿ ಟಿವಿ ಇರುವಂತೆಯೇ ಬೆಲೆ ಬಾಳುವ ನೆಕ್ಲೇಸ್‌ ಕದ್ದು ಪರಾರಿಯಾಗಿದ್ದಾನೆ. 30 ಸೆಕೆಂಡುಗಳ ಅವಧಿಯಲ್ಲಿ ನೀಟಾಗಿ ನೆಕ್ಲೆಸನ್ನು ಕದಿಯುವ ಕಳ್ಳನ ಕೈಚಳಕ ಕಂಡು ತನಿಖಾಧಿಕಾರಿಗಳು , ಚಿನ್ನಾಭರಣ ಅಂಗಡಿ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ.

ಚಿನ್ನಾಭರಣ ಮಳಿಗೆಯೊಂದರಲ್ಲಿ ಡಿಸ್‌ಪ್ಲೇ ಹಾಕಿದ್ದ ಬೆಲೆ ಬಾಳುವ ಆಭರಣವೊಂದನ್ನು ಮೇಲಿಂದ ಇಳಿದು ಬಂದ ಮೂಷಿಕವೊಂದು ಎತ್ತಿಕೊಂಡು ಹೋಗಿದೆ. ಆಭರಣ ಕಾಣದದಾಗ ಮಾಲೀಕರು ಸಹಜವಾಗಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವ ವೇಳೆ ಸಿಸಿ ಟಿವಿ ಫುಟೇಜನ್ನು ಚೆಕ್‌ ಮಾಡಿದ್ದಾರೆ.ಅದರಲ್ಲಿನ ದೃಶ್ಯ ಕಂಡು ಬೆರಗಾಗಿದ್ದಾರೆ. ವೈರಲ್‌ ಆಗುತ್ತಿರುವ ಈ ವಿಡಿಯೋ ತುಣುಕನ್ನು ನೀವೂ ಒಮ್ಮೆ ನೋಡಿ. ಮೂಷಿಕದ ಕೆಲಸಕ್ಕೆ ಏನನ್ನುತ್ತೀರೋ ನಿಮ್ಮ ವಿವೇಚನೆಗೆ ಬಿಟ್ಟದ್ದು….

click here for video👇

LEAVE A REPLY

Please enter your comment!
Please enter your name here