ಅಧಿಕಾರದ ಗದ್ದುಗೆ ಅಲ್ಲಾಡಿಸಲು ನನ್ನ ತಂದೆ ಸಮರ್ಥರು- ರೋಹಿಣಿ

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಮಂಗಳವಾರ  ಲಾಲು ಪ್ರಸಾದ್ ಯಾದವ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿರುವ ರಾಷ್ಟ್ರೀಯ ಜನತಾ ದಳ  ವರಿಷ್ಠರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ.  ಅವರಿಗೆ ಏನಾದರೂ ಆದರೆ ಯಾರನ್ನೂ ಬಿಡುವುದಿಲ್ಲ ಎಂದು ಲಾಲೂ ಪ್ರಸಾದ್ ಅವರ ಪುತ್ರಿ ಎಚ್ಚರಿಸಿದ್ದಾರೆ.

ನನ್ನ ತಂದೆಗೆ ಕಿರುಕುಳ ನೀಡುತ್ತಿರುವ ರೀತಿ ಸರಿಯಿಲ್ಲ. ಇವೆಲ್ಲವನ್ನೂ ನೆನಪಿಡಲಾಗುತ್ತದೆ. ಸಮಯ ತುಂಬಾ ಪವರ್‌ಫುಲ್ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಅವರ ಎರಡನೇ ಪುತ್ರಿ ರೋಹಿಣಿ ಆಚಾರ್ಯ ಹಿಂದಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. 74 ವರ್ಷದ ನಾಯಕ ಇನ್ನೂ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸಲು ಸಮರ್ಥರಾಗಿದ್ದಾರೆ. ಸಹಿಷ್ಣುತೆಯ ಮಿತಿಗಳನ್ನು ಈಗ ಪರೀಕ್ಷಿಸಲಾಗುತ್ತಿದೆ ಎಂದು ರೋಹಿಣಿ ಮತ್ತೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ  ದಿಲ್ಲಿಯಲ್ಲಿ ತಮ್ಮ ಪುತ್ರಿ ಹಾಗೂ  ಸಂಸದೆ ಮಿಸಾ ಭಾರ್ತಿ ಅವರ ನಿವಾಸದಲ್ಲಿ ತಂಗಿದ್ದು, ಅಲ್ಲಿಗೆ ತೆರಳಿದ ಸಿಬಿಐ ಅಧಿಕಾರಿಗಳು ಲಾಲು  ವಿಚಾರಣೆ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here