ದೆಹಲಿ: ಖಲಿಸ್ಥಾನ ಪರ ಭಾವನೆಗಳನ್ನು ವ್ಯಕ್ತ ಪಡಿಸುವ ಮೂಲಕ ಪ್ರಚೋದನೆ ಮಾಡುತ್ತಿದೆ ಎನ್ನಲಾದ ಕನಿಷ್ಠ 6 ಯು ಟ್ಯೂಬ್ ಚಾನೆಲ್ ಗಳನ್ನು ಕೇಂದ್ರ ಸರಕಾರದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ.
ವಿದೇಶದಿಂದ ಕಾರ್ಯಾಚರಿಸುತ್ತಿದ್ದ ಆರರಿಂದ ಎಂಟು ಚಾನೆಲ್ ಗಳನ್ನು ಕಳೆದ 10 ದಿನಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಪಂಜಾಬಿ ಬಾಷೆಯ ಈ ಚಾನೆಲ್ ಗಳು ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಮಾಹಿತಿ ಮತ್ತು ಪ್ರಚಾರ ಖಾತೆಯ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.