ಮಂಗಳೂರು: ವಾಯುವ್ಯ ದಿಲ್ಲಿಯ ಮಂಗೋಲ್‌ಪುರಿಯಲ್ಲಿ ವ್ಯಕಿಯೊಬ್ಬ ಯುವತಿ ಮೇಲೆ ಹಲ್ಲೆ ನಡೆಸಿ ಕ್ಯಾಬ್ ನೊಳಗೆ ಬಲವಂತವಾಗಿ ತಳ್ಳುತ್ತಿರುವ, ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಇದನ್ನು ಅಸಹಾಯಕನಂತೆ ನೋಡುತ್ತಿರುವ 17 ಸೆಕೆಂಡ್ ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬರಿಗಾಲಿನಲ್ಲಿದ್ದ ವ್ಯಕ್ತಿ, ಜನನಿಬಿಡ ರಸ್ತೆಯ ಮಧ್ಯದಲ್ಲಿ ಮಹಿಳೆಯನ್ನು ಥಳಿಸುವುದು ಕಂಡುಬಂದಿದೆ. ಥಳಿಸಿದ ನಂತರ ಬಲವಂತವಾಗಿ ಕ್ಯಾಬ್‌ಗೆ ತಳ್ಳುವುದು ಹಾಗೂ ಕ್ಯಾಬ್‌ನೊಳಗೆ ಪದೇ ಪದೇ ಗುದ್ದುವುದು, ಇನ್ನೊಬ್ಬ ವ್ಯಕ್ತಿ ಇದನ್ನು ನೋಡಿ ಸುಮ್ಮನೆ ಕುಳಿತಿರುವುದು ಕಂಡುಬಂದಿದೆ. ನಂತರ ಇಬ್ಬರೂ ಕ್ಯಾಬ್‌ನೊಳಗೆ ಪ್ರವೇಶಿಸಿ ಮುಂದೆ ಸಾಗಿದರು. ಕ್ಯಾಬ್ ಡ್ರೈವರ್ ಸೇರಿದಂತೆ ಯಾರೂ ಕೂಡ ಮಹಿಳೆಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿಲ್ಲ.
ಪೊಲೀಸರು ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ತನಿಖೆ ಆರಂಭಿಸಿ ಕ್ಯಾಬ್ ಹಾಗೂ ಚಾಲಕನನ್ನು ಪತ್ತೆಹಚ್ಚಿದ್ದಾರೆ. ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆಪ್ ಮೂಲಕ ವಾಹನವನ್ನು ಬುಕ್ ಮಾಡಲಾಗಿತ್ತು. ಮಾರ್ಗ ಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಯಿತು ಎಂದು ದಿಲ್ಲಿ ಪೊಲೀಸ್ ಹೊರ ಜಿಲ್ಲೆಯ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.
Man in Delhi forces a woman into a cab, near Mangolpuri flyover. The vehicle and the driver have been traced.
Two boys & a girl had booked Uber from Rohini to Vikaspuri. The girl wanted to leave following an argument, after which the boy pushes her back into the cab. #Delhi pic.twitter.com/s2rkfgnaqh
— Vani Mehrotra (@vani_mehrotra) March 19, 2023