ತ್ಯಾಜ್ಯದ ರಾಜ್ಯವಾಗುತ್ತಿರುವ ಮಂಗಳೂರು – ಮುಗಿಯದ ಪೌರ ಕಾರ್ಮಿಕರ ವ್ಯಾಜ್ಯ

ಮಂಗಳೂರು: ಸ್ಥಳೀಯಾಡಳಿತ ಸಂಸ್ಥೆಗಳ ಹೊರಗುತ್ತಿಗೆ ನೌಕರರ ವೇತನವನ್ನು ನೇರವಾಗಿ ಪಾವತಿ ಮಾಡಬೇಕು ಮತ್ತು ಹಂತ ಹಂತವಾಗಿ ಹುದ್ದೆಯನ್ನು ಖಾಯಂಗೊಳಿಸಬೇಕು ಹಾಗೂ ಸಮಾನ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿ ಕಳೆದ 13 ದಿನದಿಂದ ನಡೆಯುವ ಹೊರಗುತ್ತಿಗೆ ನೌಕರರ ಮುಷ್ಕರವು ತಾರಕಕ್ಕೇರಿದೆ.

ಮುಷ್ಕರದಿಂದ ಒಳಚರಂಡಿ ಅವ್ಯವಸ್ಥೆಯ ಆಗರವಾಗಿದೆ. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ಮಂಗಳೂರು ದುರ್ನಾತಮಯವಾಗಿದೆ.

ದ.ಕ.ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಶಾಸಕರು, ಸಂಸದರ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯ ಸಮಯದಲ್ಲೇ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ಚುನಾವಣೆಯ ಬಳಿಕ ಏನು ಮಾಡಿಯಾರು ಎಂದು ಪ್ರಶ್ನಿಸತೊಡಗಿದ್ದಾರೆ. ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಯು ಸಮಸ್ಯೆಯಾಗಿ ಕಾಡಿದೆ. ಮನೆ, ವಸತಿ ಸಮುಚ್ಚಯ, ಅಂಗಡಿಗಳ ಮುಂದೆ, ರಸ್ತೆ ಪಕ್ಕದ ಇಕ್ಕಡೆಗಳಲ್ಲಿ ಕಸದ ರಾಶಿ ಕಂಡು ಬಂದಿದೆ. ಬಹುತೇಕ ರಸ್ತೆ, ಓಣಿಗಳಲ್ಲಿ ರಾಶಿ ಬಿದ್ದ ಕಸ ಕೊಳೆತು ನಾರುತ್ತಿದೆ. ಕೆಲವು ಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ನಗರದ ದುರ್ನಾತಮಯವಾಗಿದೆ. ಕಸದ ರಾಶಿಯ ಸುತ್ತ ಮುತ್ತ ಸೊಳ್ಳೆಗಳ ಹಾವಳಿಯಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರಿದ್ದಾರೆ.

LEAVE A REPLY

Please enter your comment!
Please enter your name here