ಹೆತ್ತಮ್ಮನ ಕಣ್ಣ ಮುಂದೆ ಮಗನ ಮೇಲೆ ಹರಿದ ಬಸ್

ಮಂಗಳೂರು: ಕಂಕನಾಡಿ ಸಮೀಪದ ಬೆಂದೂರ್‌ವೆಲ್ ಬಳಿ ಮಾ.24ರಂದು ನಡೆದ ಅಪಘಾತದಲ್ಲಿ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದ ಬಾಲಕ ಮೃತಪಟ್ಟಿರುತ್ತಾರೆ. ನಗರದ ಕೊಡಿಯಾಲ್‌ಬೈಲ್ ಶಾಲೆಯೊಂದರ 5ನೇ ತರಗತಿ ವಿದ್ಯಾರ್ಥಿ ನಂತೂರಿನ ಹಾರ್ದಿಕ್ (11) ಮೃತಪಟ್ಟ ಬಾಲಕನಾಗಿದ್ದು, ಆತನ ತಾಯಿ ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಶ್ವೇತಾ (35) ಗಾಯಗೊಂಡಿದ್ದಾರೆ.

ಶ್ವೇತಾ ತನ್ನ ಮಗ ಹಾರ್ದಿಕ್ ಜೊತೆ ಕಂಕನಾಡಿಯಿಂದ ನಂತೂರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬೆಂದೂರ್‌ವೆಲ್ ಸಮೀಪ ನಿಂತಿದ್ದ ಬಸ್ ಏಕಾಏಕಿ ಚಲಿಸಿದೆ. ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದಿದ್ದು ಇದೇ ವೇಳೆ ಬಂದ ಮತ್ತೊಂದು ಬಸ್ ಬಾಲಕನ ಮೇಲೆ ಹರಿದಿದೆ. ಘಟನೆಯಲ್ಲಿ ಬಾಲಕ ಮೃತಪಟ್ಟರೆ, ಶ್ವೇತಾ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here