ದಾಸ್ತಾನು ಘಟಕಕ್ಕೆ ಬೆಂಕಿ – ಕರಗಿದ ಐಸ್‌ಕ್ರೀಮ್- ನಾಲ್ಕು ಕೋಟಿ ನಷ್ಟ

ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಕೆಎಂಎಫ್ ನಂದಿನಿ ಐಸ್ ಕ್ರೀಮ್ ಘಟಕದಲ್ಲಿ ಮಾ.27ರ ಸೋಮವಾರ ರಾತ್ರಿ ಬೆಂಕಿ ಅವಘದ ಸಂಭವಿಸಿದೆ.


ಘಟಕದಲ್ಲಿ ದಾಸ್ತಾನಿದ್ದ ಒಂದು ಕೋಟಿಗೂ ಅಧಿಕ ಮೌಲ್ಯದ ಐಸ್ ಕ್ರೀಮ್, ಮೂರು ಶೈತ್ಯಾಗಾರಗಳು ಹಾಗೂ ಶೈತ್ಯಾಗಾರ ಅಳವಡಿಸಿದ್ದ ವಾಹನವೊಂದು ಬೆಂಕಿಗೆ ಆಹುತಿಯಾಗಿದೆ. ಒಟ್ಟು ಸುಮಾರು ನಾಲ್ಕು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕರಾವಳಿಯ ಕಾಸರಗೋಡಿನಿಂದ ಕಾರವಾರದವರೆಗಿನ ವಿತರಕರಿಗೆ ಈ ಘಟಕದಿಂದ ಕೆಎಂಎಫ್ ನಂದಿನಿ ಬ್ರಾಂಡ್ ನ ಐಸ್ ಕ್ರೀಮ್ ಸರಬರಾಜು ಮಾಡಲಾಗುತ್ತಿತ್ತು. ಐಸ್ ಕ್ರೀಮ್ ತಿನ್ನಲು ಬಳಸುವ ಚಮಚವನ್ನು ಇಲ್ಲಿಯೇ ತಯಾರಿಸಲಾಗುತ್ತಿದ್ದು ಕಳೆದ 18 ವರ್ಷಗಳಿಂದ ಈ ಘಟಕ ಇಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಮದ್ಯ ರಾತ್ರಿ ವೇಳೆ ಬೆಂಕಿ ಹತ್ತಿಕೊಂಡಿದೆ ಎಂದು ಶoಕಿಸಲಾಗಿದ್ದು ಅಗ್ನಿ ಶಾಮಕ ದಳದ ಮೂರು ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಘಟಕದಲ್ಲಿನ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here