ಮಕ್ಕಳೊಂದಿಗೆ ಡಾನ್ಸ್‌ ಮಾಡಿದ ಶಿಕ್ಷಕಿ ವಂದನಾ ರೈ – ನೋಡಿ ನೀವೂ ಹೇಳಿ ಜೈ

ಮಂಗಳೂರು: ಜೋರಾಗಿ ಮಳೆ ಸುರಿಯಲಿ, ಶಾಲೆಗೆ ರಜೆ ಸಿಗಲಿ ಎಂದು ಪ್ರಾರ್ಥಿಸುವ ಮಕ್ಕಳಿಗೆ ಪರೀಕ್ಷೆ ಮುಗಿದು ರಜೆ ಸಿಗುತ್ತಿದೆ ಎಂದರೆ ಎಷ್ಟು ಖುಷಿಯಾಗಲ್ಲ? ರಜೆಯಲ್ಲಿ ಅಜ್ಜಿ ಮನೆಗೆ, ನೆಂಟರ ಮನೆಗೆ, ಇನ್ನೇನೋ ಕನಸುಗಳನ್ನು ಕಟ್ಟಿಕೊಂಡ ಮಕ್ಕಳು ಪರೀಕ್ಷೆ ಮುಗಿಯುವುದನ್ನೇ ಕಾಯುತ್ತಿರುತ್ತಾರೆ. ರಜೆ ಸಿಗುತ್ತದೆ ಎನ್ನುವ ಗುಂಗಿನಲ್ಲಿರುವ ಮಕ್ಕಳು ಪರೀಕ್ಷೆಗೆ ಅದೇನನ್ನು ಬರೆಯುತ್ತಾರೋ ಎಂಬ ಕಾರಣಕ್ಕೆ ಅವರನ್ನು ಹುರಿದುಂಬಿಸಲು ಶಿಕ್ಷಕಿಯೋರ್ವರು ಚೆನ್ನಾಗಿ ಪರೀಕ್ಷೆ ಬರೆಯಿರಿ, ಪರೀಕ್ಷೆ ಮುಗಿದ ಮೇಲೆ ಜತೆಯಲ್ಲಿ ಡಾನ್ಸ್‌ ಮಾಡೋಣ ಎಂದು ಹುರಿದುಂಬಿಸುತ್ತಾರೆ. ಪರೀಕ್ಷೆ ಮುಗಿದ ಮೇಲೆ ಮಕ್ಕಳ ಜೊತೆ ಡಾನ್ಸ್‌ ಮಾಡುವ ಮೂಲಕ ಶಿಕ್ಷಕಿ ತನ್ನ ಮಾತನ್ನು ಉಳಿಸಿ ಕೊಳ್ಳುತ್ತಾರೆ. ಶಿಕ್ಷಕಿಯ ಮತ್ತು ಮಕ್ಕಳ ನೃತ್ಯದ ಈ ವಿಡಿಯೋ ಸಖತ್‌ ವೈರಲಾಗಿದ್ದು, ಜನ ಮತ್ತೆ ಮತ್ತೆ ಅದನ್ನ ನೋಡಿ ಎಂಜಾಯ್‌ ಮಾಡುತ್ತಿದ್ದಾರೆ. ಮಕ್ಕಳಿಗೆ ಪಾಠ ಹೇಳುವುದರಲ್ಲಿ ಸೈ ಎನಿಸಿ ಕೊಂಡಿರುವ ವಂದನಾ ರೈ ಈಗ ನೃತ್ಯದಲ್ಲೂ ಸೈ ಎನಿಸಿ ಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದ ಜೇಸಿಸ್ ಶಾಲೆಯ ನರ್ಸರಿ, ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕಿ ವಂದನಾ ರೈ ನೃತ್ಯ ಮಾಡಿ, ಪುಟಾಣಿಗಳನ್ನು ಸಂತೋಷ ಪಡಿಸಿದ ವಿಡಿಯೋ ಇದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎರಡು ಮಿಲಿಯನ್‌ಗೂ ಹೆಚ್ಚು ಜನ ನೋಡಿದ್ದಾರೆ. ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಕಿ ವಂದಾನಾ ರೈ, ಪರೀಕ್ಷೆ ಚೆನ್ನಾಗಿ ಬರೆಯಿರಿ ಅಂತ ಶುಭ ಹಾರೈಸಿ ಬಳಿಕ ಡ್ಯಾನ್ಸ್ ಮಾಡೋಣ ಅಂದಿದ್ದರು. ಪರೀಕ್ಷೆ ಮುಗಿದ ಬಳಿಕ ತರಗತಿ ಬೋರ್ಡ್ ನಲ್ಲಿ ” ಪರೀಕ್ಷೆ ಮುಗಿಯಿತು …ಹುರ್ರೆ ಅಂತ ಬರೆದು, ಮ್ಯೂಸಿಕ್ ಹಾಕಿ ಯಾವುದೇ ತಯಾರಿ ಇಲ್ಲದೇ ಸೂಪರ್ ಡ್ಯಾನ್ಸ್ ಮಾಡಿ ಮಕ್ಕಳ ಮೈ ಮನಸ್ಸಿನಲ್ಲಿ ಉಲ್ಲಾಸ ತುಂಬಿದ್ದಾರೆ. ಶಿಕ್ಷಕಿ ವಂದನಾ ರೈ ಗೆ ವಂದನೆ ಹೇಳಲೇ ಬೇಕು ಏನಂತೀರಿ?…

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here