



ಮಂಗಳೂರು: ತನ್ನನ್ನು ಚುಡಾಯಿಸಿದ ಬೀದಿ ಕಾಮಣ್ಣನಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನದಲ್ಲಿ ನಡೆದಿದೆ.







ಕಾಲೇಜಿನಿಂದ ಮನೆಗೆ ತೆರಳುವ ವೇಳೆ ಯುವತಿಯನ್ನು ಚುಡಾಯಿಸಿದ ಯುವಕನೊಬ್ಬ ಆಕೆಯ ಕೈಹಿಡಿದು ಎಳೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಆಕೆ ʼಪ್ರತಿದಿನ ಹೀಗೆ ಮಾಡುತ್ತೀಯಾʼ ಎಂದು ಯುವಕನಿಗೆ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾಳೆ. ವಿಚಾರ ತಿಳಿದ ಜನಸಾಮಾನ್ಯರು ಯುವಕನಿಗೆ ತಮ್ಮ ಕೈಯಲ್ಲಾದ ಗೂಸ ನೀಡಿದ್ದಾರೆ. ಹಾಸನ ನಗರದ ಬಿಎಸ್ಎನ್ಎಲ್ ಭವನದ ಬಳಿ ಈ ಘಟನೆ ನಡೆದಿದ್ದು ಹಾಸನ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.



https://www.facebook.com/watch/?v=1270390473551657











