ಸ್ಲಂ ಗೆ ಬೆಂಕಿ – 200 ಮನೆ ಭಸ್ಮ

ಮಂಗಳೂರು: ಪಾಟ್ನಾದ ಶಾಸ್ತ್ರಿ ನಗರದಲ್ಲಿರುವ ಸ್ಲಂ ಏರಿಯಾದ ಒಂದೆಡೆ ಕಾಣಿಸಿಕೊಂಡ ಬೆಂಕಿ ಒಂದಾದ ಬಳಿಕ ಒಂದು ಮನೆಯನ್ನು ಆವರಿಸಿಕೊಂಡಿದೆ.

ಇದರಿಂದ ಒಮ್ಮೆಲೆ ಬಿಚ್ಚಿ ಬಿದ್ದ ಸ್ಲಂ ನಿವಾಸಿಗಳು ತಮ್ಮ ಮನೆಯ ಗ್ಯಾಸ್ ಸಿಲಿಂಡರ್ ,ಟ್ರಂಕ್, ಬಟ್ಟೆ ಬರೆ ಸೇರಿದಂತೆ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಗುಡಿಸಲು ಖಾಲಿ ಮಾಡಿದ್ದಾರೆ. ಬಾರಿ ಬೆಂಕಿಯಿಂದ ಆಕಾಶದೆತ್ತರಕ್ಕೆ ಹೊಗೆ ಹಬ್ಬಿದ್ದು ಜನರು ಗಾಬರಿಯಿಂದ ಓಡಿ ಓಡಿ ಎಂದು ಹೇಳುತ್ತಾ ಓಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಗುಡಿಸಲುಗಳು ಹೊತ್ತಿ ಕರಕಲಾಗಿದೆ. ಅಗ್ನಿಶಾಮಕ ದಳದ 24 ವಾಹನಗಳು ಮತ್ತು ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here