



ಮಂಗಳೂರು: ಗದಗ ಜಿಲ್ಲೆಯ ಹಲವಡೆ ಏ.7ರಂದು ಆಲಿಕಲ್ಲು ಮಳೆಯಾಗಿದ್ದು, ರೋಣ ತಾಲೂಕಿನ ಕೊತಬಾಳು ಗ್ರಾಮ, ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.









ಕೊತಬಾಳುವಿನ ಜಮೀನು, ರಸ್ತೆಗಳಲ್ಲಿ ಆಲಿಕಲ್ಲುಬಿದ್ದಿದ್ದು ಹಿಮದ ರಾಶಿಯಂತೆ ಭಾಸವಾಗುತ್ತಿದೆ. ಆಲಿಕಲ್ಲು ಬಿದ್ದ ರಭಸಕ್ಕೆ ಹಂಚಿನ ಮೇಲ್ಚಾವಣಿ ಮನೆಗಳಿಗೆ ಹಾನಿಯಾಗಿದೆ. ಇನ್ನು ಬಿರುಗಾಳಿಗೆ ಹಲವು ಮರಗಳು ಧರೆಗುರಳಿದೆ. ಆಲಿಕಲ್ಲು ಮಳೆಯಿಂದಾಗಿ ಸಾರ್ವಜನಿಕರು, ವಾಹನ ಸವಾರರು ಕೆಲಕಾಲ ಪರದಾಡುವಂತೆ ಆಗಿತ್ತು.



ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ











