ಸಂಕಷ್ಟದಲ್ಲಿ ಖ್ಯಾತ ತಮಿಳು ನಟ ವಿಶಾಲ್

ಮಂಗಳೂರು:ಖ್ಯಾತ ತಮಿಳು ಚಿತ್ರ ನಟ ವಿಶಾಲ್ ಸಾಲದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 21.29 ಕೋಟಿ ಸಾಲ ಪಡೆದ ವಿಚಾರವಾಗಿ ತಮಿಳುನಾಡು ಹೈಕೋರ್ಟ್ ನಟ ವಿಶಾಲ್ ಗೆ ನೋಟಿಸ್ ಜಾರಿ ಮಾಡಿದೆ.

ತಮ್ಮ ನಿರ್ಮಾಣ ಸಂಸ್ಥೆ ಫಿಲಂ ಫ್ಯಾಕ್ಟರಿ ಮೂಲಕ ಸಿನಿಮಾ ನಿರ್ಮಾಣಕ್ಕಾಗಿ ವಿಶಾಲ್ ಇನ್ನೊಂದು ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ನಿಂದ ಸಾಲ ಪಡೆದಿದ್ದರು. ಆದರೆ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಲೈಕಾ ಸಂಸ್ಥೆಯು ವಿಶಾಲ್ ವಿರುದ್ಧ ದೂರು ದಾಖಲಿಸಿದ್ದು ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ಪೀಠ 15 ಕೋಟಿ ಪಾವತಿ ಮಾಡದ ಹೊರತು ವಿಶಾಲ್ ಅಭಿನಯದ ಯಾವುದೇ ಸಿನಿಮಾ ರಿಲೀಸ್ ಮಾಡದಂತೆ ತೀರ್ಪು ನೀಡಿದೆ.

LEAVE A REPLY

Please enter your comment!
Please enter your name here