ಮಂಗಳೂರು : ಟಿಪ್ಪು ಸುಲ್ತಾನ್ ಔರಂಗಜೇಬನನ್ನು ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 144 ಸೆಕ್ಷನ್. ಜಾರಿ ಮಾಡಲಾಗಿದೆ.
ಮುಸ್ಲಿಂ ಸಂಘಟನೆ ಸದಸ್ಯರು ಟಿಪ್ಪು ಮತ್ತು ಮೊಘಲ್ ದೊರೆ ಔರಂಗಜೇಬನ ಫೋಟೋ ಮತ್ತು ಆಕ್ಷೇಪಾರ್ಹ ಆಡಿಯೋ ಒಂದನ್ನು ಹಂಚಿಕೊಂಡಿದ್ದು, ಅದನ್ನು ತಮ್ಮ ಸ್ಟೇಟಸ್ ಪ್ರೊಫೈಲ್ ಗಳಲ್ಲಿ ಹಾಕಿಕೊಂಡಿದ್ದರು.
ಇದನ್ನು ವಿರೋಧಿಸಿ ಶಿವಸೇನೆಯ ಸದಸ್ಯರು ಬೀದಿಗಿಳಿದಿದ್ದು ಟಿಪ್ಪು ಔರಂಗಜೇಬನನ್ನು ವೈಭವೀಕರಿಸಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆ ವೇಳೆ ಕಲ್ಲುತೂರಾಟಗಳು ನಡೆದಿದ್ದು ಬಳಿಕ ಪರಿಸ್ಥಿತಿ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಘಟನೆ ಬಳಿಕ ಪೊಲೀಸ್ ಭದ್ರತೆ ಹೆಚ್ಚಿಸಿದ್ದು ಉದ್ರಿಕ್ತರನ್ನು ಚದುರಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಜೂನ್ 7ರ ಸಂಜೆಯಿಂದ ಜೂನ್ 8ರ ಮಧ್ಯರಾತ್ರಿವರೆಗೆ ಕೊಲ್ಲಾಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ 21 ಮಂದಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ದೇವೇಂದ್ರ ಪಡ್ನವೀಸ್ ತಿಳಿಸಿದ್ದಾರೆ.