ಮಕ್ಕಳಿಗಾಗಿ ವಿಶೇಷ ಮಾಹಿತಿ
ಕಾಡು ಹಂದಿ ( Sus scrofa)
ಕುಟುಂಬ: ಸುಯಿಡೇ ತಳಿವರ್ಗ : ಸಸ್ – ಈ ಪ್ರಭೇದವು ಅನೇಕ ಉಪ ವರ್ಗಗಳನ್ನು ಒಳಗೊಂಡಿದೆ. ದೇಹವು ಮಟ್ಟಸವಾಗಿದ್ದು ದೊಡ್ಡ ತಲೆ ಚಿಕ್ಕ ಕಾಲು ಹಾಗೂ ಒರಟಾದ ಚರ್ಮ ಅದರ ಮೇಲೆ ನುಣುಪಾದ ರೋಮಗಳ ಮೇಲ್ ಹೊದಿಕೆ ಹೊಂದಿರುತ್ತದೆ. ನೋಡಲು ದಟ್ಟ ಬೂದು ಬಣ್ಣ ಅಥವಾ ಕಪ್ಪುವರ್ಣ, ಕಂದು ಬಣ್ಣ ಹೀಗೆ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಅಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಚರ್ಮದ ಬಣ್ಣದ ಜೊತೆಗೆ ಶರೀರದ ಮೇಲಿನ ರೋಮಗಳಲ್ಲಿಯೂ ಕೂಡ ಬದಲಾವಣೆಯನ್ನು ಕಾಣಬಹುದಾಗಿದೆ.
ಹೆಚ್ಚಾಗಿ ಕಾಡು ಹಂದಿಯನ್ನು ಎಂದು ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳಲ್ಲಿ ಕಾಣಬಹುದು. ಉತ್ತರ ಹಾಗೂ ಮಧ್ಯ ಯುರೋಪ್ ಮೆಡಿಟರೇನಿಯನ್ ಪ್ರದೇಶ ಏಷ್ಯಾ ಖಂಡ, ಇಂಡೋನೇಷಿಯಾ, ಆಸ್ಟ್ರೇಲಿಯಾ, ಅಮೆರಿಕ ಇತ್ಯಾದಿ. ಸಾಮಾನ್ಯವಾಗಿ 40 ರಿಂದ 50 ಕೆಜಿ, ತೂಕ 22 ರಿಂದ 43 ಇಂಚಷ್ಟು ಭುಜದ ಎತ್ತರ, 35 ರಿಂದ 79 ಇಂಚಿನಷ್ಟು ಉದ್ದ ಹಾಗೂ 16 ಇಂಚಿನಷ್ಟು ಬಾಲದ ಅಳತೆ ಇರುತ್ತದೆ. ಗಂಡು ಕಾಡು ಹಂದಿಗಳಿಗೆ ಬಲಿಷ್ಠವಾದ ಕೋರೆ ಹಲ್ಲುಗಳಿದ್ದು ಬಾಯಿಂದ ಹೊರಗೆ ಕಾಣುತ್ತಿರುತ್ತದೆ. ಈ ಕೋರೆ ಹಲ್ಲುಗಳು ತಮ್ಮನ್ನು ಭಕ್ಷಕರಿಂದ ಸಂರಕ್ಷಿಕೊಳ್ಳಲು ಉತ್ತಮ ಸಾಧನವಾಗಿದ್ದು, ಇವುಗಳು ನಿರಂತರವಾಗಿ ಬೆಳೆಯುತ್ತಿರುತ್ತದೆ. ಸಾಮಾನ್ಯವಾಗಿ ಈ ದಂತಗಳು ಎರಡು ಪಾಯಿಂಟ್ ನಾಲ್ಕು ಇಂಚಿನಿಂದ 4.7 ಇಂಚಿನಷ್ಟು ಇರುವುದು. ಹೆಣ್ಣು ಕಾಡು ಹಂದಿಗಳಿಗೂ ಈ ಕೋರೆದಂತೆಗಳಿದ್ದು, ಗಂಡಿನಷ್ಟು ದೊಡ್ಡದಾದ ದಂತವಿರುವುದಿಲ್ಲವಾದರೂ ಬಹಳ ಚೂಪಾಗಿರುವುದು.
ಕಾಡು ಹಂದಿಯ ಮರಿಗಳು ನೋಡಲು ಚಾಕಲೇಟ್ ಕಂದು ಬಣ್ಣವಿದ್ದು ಅದರ ಮೇಲೆ ಚಂದನ ವರ್ಣದ ಪಟ್ಟೆಗಳು ಇರುವುದು. ಈ ಮರಿಗಳು ಆರು ತಿಂಗಳಾದ ಮೇಲೆ ಈ ಉದ್ದ ಪಟ್ಟೆಗಳು ಮಾಸಿಹೋಗಿ ಬೂದು ಅಥವಾ ಕಂದು ಬಣ್ಣವಾಗಿ ಪರಿವರ್ತನೆಗೊಳ್ಳುವುದು. ಇನ್ನು ಮನುಷ್ಯರಿಗೂ ಇದು ಅಷ್ಟೇ ಅಪಾಯಕಾರಿ ಅದರಲ್ಲೂ ಮರಿ ಹಾಕಿದ ನಂತರ ಇವುಗಳ ಸಾಮೀಪ್ಯ ಒಳ್ಳೆಯದಲ್ಲ.