ನೀರು ಬತ್ತಿದ ಡ್ಯಾಂ ನಲ್ಲಿ ಎರಡು ಅಸ್ಥಿಪಂಜರಗಳಿದ್ದ ಕಾರು ಪತ್ತೆ – ಮರ್ಯಾದಾ ಹತ್ಯೆ ಶಂಕೆ

ಮಂಗಳೂರು/ಮಧ್ಯಪ್ರದೇಶ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕುವಾರಿ ನದಿಗೆ ಗೋಪಿ ಗ್ರಾಮದ ಬಳಿ ನಿರ್ಮಿಸಲಾದ ಸ್ಟಾಪ್ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದ ಕಾರಣ, ಕಾರು ಕಾಣಿಸಿಕೊಂಡಿದ್ದು ಕಾರಿನ ಮಧ್ಯದ ಸೀಟಿನಲ್ಲಿ ಮಹಿಳೆ ಹಾಗೂ ಪುರುಷರೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. 

ಪತ್ತೆಯಾದ ಅಸ್ಥಿಪಂಜರಗಳನ್ನು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಛಟ್ ಕಾ ಪುರದ ನಿವಾಸಿ ಜಗದೀಶ್ ಜಾಧವ್ ಅವರ ಪುತ್ರ 26 ವರ್ಷದ ನೀರಜ್ ಮತ್ತು ಛಟ್ ಕಾ ಪುರ ನಿವಾಸಿ ಮುಖೇಶ್ ಜಾಧವ್ ಅವರ ಪತ್ನಿ 32 ವರ್ಷದ ಮಿಥಿಲೇಶ್ ಅವರದ್ದು ಎಂದು ಗುರುತಿಸಲಾಗಿದ್ದು ಗುರುದ್ವಾರ ಮೊಹಲ್ಲಾ ಅಂಬಾಹ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ನೀರಜ್ ಜಾಧವ್ ಮತ್ತು ಮಹಿಳೆಯ ಪತಿ ಮುಖೇಶ್ ಜಾಧವ್ ಸೋದರ ಸಂಬಂಧಿಗಳು. ಮಹಿಳೆಯ ಪತಿ ಅಂಬಾದಲ್ಲಿ ಸರ್ಕಾರಿ ಶಿಕ್ಷಕರಾಗಿದ್ದು, ಗುರುದ್ವಾರ ಮೊಹಲ್ಲಾ ಅಂಬಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶಿಕ್ಷಕ ಮುಖೇಶ್ ಜಾಧವ್ ಫೆಬ್ರವರಿ ತಿಂಗಳಲ್ಲಿ ಅಂಬಾಹ್ ಪೊಲೀಸ್ ಠಾಣೆಯಲ್ಲಿ ಪತ್ನಿ ಮಿಥಿಲೇಶ್ ನಾಪತ್ತೆ ದೂರು ದಾಖಲಿಸಿದ್ದರು.

ಅದೇ ಸಮಯದಲ್ಲಿ ನೀರಜ್ ಜಾಧವ್ ಕೂಡ ಮನೆಯಿಂದ ನಾಪತ್ತೆಯಾಗಿದ್ದರು. ಆದರೆ ಯುವಕನ ಕುಟುಂಬವು ಯಾವುದೇ ದೂರು ನೀಡಿರಲಿಲ್ಲ. ಇದು ಮರ್ಯಾದಾ ಹತ್ಯೆಯೋ ಅಥವಾ ಅಕಸ್ಮಾತ್​ ಆಗಿ ಕಾರು ನದಿಗೆ ಬಿದ್ದಿದೆಯೋ ಎಂಬುದು ತಿಳಿದುಬಂದಿಲ್ಲ. ಮಂಗಳವಾರ ಬೆಳಗ್ಗೆ ಸ್ಟಾಪ್ ಡ್ಯಾಂನ ಗೇಟ್ ತೆರೆಯಲಾಗಿತ್ತು. ಮಧ್ಯಾಹ್ನದ ವೇಳೆಗೆ ಡ್ಯಾಂ ನಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ  ಕಾರು ಕಾಣಿಸಿಕೊಂಡಿದೆ. ಪೊಲೀಸರು ಸ್ಥಳಕ್ಕಾಗಮಿಸಿದ ಸಿಹೋನಿಯಾ ಠಾಣೆ ಕಾರಿನ ಸಮೇತ ಅಸ್ಥಿಪಂಜರಗಳನ್ನು ಹೊರತೆಗೆದಿದ್ದಾರೆ.  ಮೃತರ ಗ್ರಾಮ ಸಮೀಪದಲ್ಲೇ ಇದ್ದುದರಿಂದ ಗ್ರಾಮಸ್ಥರು ಅವರನ್ನು ಪತ್ತೆಹಚ್ಚಿದ್ದಾರೆ. ಮಾಹಿತಿ ಪಡೆದ ಸಿಹೋನಿಯಾ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

LEAVE A REPLY

Please enter your comment!
Please enter your name here