52 ಡಿಗ್ರಿ ಸೆಲ್ಸಿಯಸ್ ತಾಪಮಾನ – ಮಕ್ಕಾದಲ್ಲಿ 550 ಹಜ್ ಯಾತ್ರಾರ್ಥಿಗಳ ಮೃತ್ಯು

ಮಂಗಳೂರು/ಸೌದಿ ಅರೇಬಿಯ: ಸುಡು ಬಿಸಿಲ ಬೇಗೆಗೆ ಇದುವರೆಗೆ 550ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಮೃತಪಟ್ಟವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟ್ ದೇಶದವರಾಗಿದ್ದು 60 ಮಂದಿ ಜೋರ್ಡಾನ್‌ ಪ್ರಜೆಗಳಾಗಿದ್ದಾರೆ. ವಿವಿಧ ದೇಶಗಳಿಗೆ ಸೇರಿದ ಒಟ್ಟು 577 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ. ಬಹುತೇಕ ಮಂದಿ ಉಷ್ಣ ಸಂಬಂಧಿ ಅಸ್ವಸ್ಥತೆಗಳಿಗೆ ಬಲಿಯಾಗಿದ್ದಾರೆ ಎಂದು ಈ ಬಗ್ಗೆ ಸಮನ್ವಯ ಮಾಡುತ್ತಿರುವ ಎರಡು ಅರಬ್ ದೇಶಗಳ ರಾಜತಾಂತ್ರಿಕರು ಹೇಳಿದ್ದಾರೆ. ಒಬ್ಬ ವ್ಯಕ್ತಿ ಸಣ್ಣ ಗುಂಪಿನ ತಳ್ಳಾಟದಲ್ಲಿ ಸಿಲುಕಿ ಆದ ಗಾಯಗಳಿಂದ ಮೃತಪಟ್ಟಿರುವುದು ಹೊರತುಪಡಿಸಿದರೆ ಎಲ್ಲಾ ಈಜಿಪ್ಟಿಯನ್ನರು ಬಿಸಿಲ ಬೇಗೆಯಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸ್ಥಳದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿದೆ. ಮಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇಂದು ತಾಪಮಾನ 52 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here