ಮಂಗಳೂರು/ಬೆಂಗಳೂರು: ಆನ್ ಲೈನ್ ವ್ಯವಹಾರದ ದೈತ್ಯ ಕಂಪನಿ ಅಮೆಜಾನ್, ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದ ಬೆಂಗಳೂರಿನ ಗ್ರಾಹಕರಿಗೆ ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದ್ದು ಭಾರಿ ಸುದ್ದಿಯಾಗಿದೆ.
ಅಮೆಜಾನ್‌ನಿಂದ ಬಂದ ಬಾಕ್ಸ್ ತೆರೆದಾಗ ಎಕ್ಸ್‌ಬಾಕ್ಸ್ ಕಂಟ್ರೋಲರ್ ಜೊತೆಗೆ ಹಾವು ಕಾಣಿಸಿಕೊಂಡಿದೆ. ಬಾಕ್ಸ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಹಾವು ಸಿಲುಕಿಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಬಾಕ್ಸ್ ಅನ್ನು ಬಕೆಟ್‌ನಲ್ಲಿಟ್ಟು ವಿಡಿಯೋ ಮಾಡಲಾಗಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ತನ್ವಿ ಎಂಬವರು, ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಎಕ್ಸ್‌ನಲ್ಲೇ ಪ್ರತಿಕ್ರಿಯಿಸಿರುವ ಅಮೆಜಾನ್ ಕ್ಷಮೆಯಾಚಿಸಿದ್ದು ಕೂಡಲೇ ಸಂಪರ್ಕಿಸುವುದಾಗಿ ತಿಳಿಸಿದೆ. ತನ್ವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಲವರು, ದೂರು ದಾಖಲಿಸಿ ಎಂದು ಸಲಹೆ ನೀಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
In a shocking incident, a family on Sarjapur Road received a live Spectacled Cobra with their Amazon order for an Xbox controller.
The venomous snake was fortunately stuck to packaging tape, preventing harm.#ITReel #Sarjapur #AmazonOrder #SnakeInAmazonOrder pic.twitter.com/EClaQrt1B6
— Prakash (@Prakash20202021) June 19, 2024