ಮಂಗಳೂರು/ಪುಣೆ: ಇದು ಹಾಲಿವುಡ್ ಸಿನಿಮಾದ ದೃಶ್ಯವಲ್ಲ. ರೀಲ್ಗಾಗಿ ಯುವಕ ಹಾಗೂ ಯುವತಿ ನಡೆಸಿದ ಒಂದು ಅಪಾಯಕರ ಸಾಹಸ. ನೂರು ಅಡಿ ಎತ್ತರದ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕೇವಲ ಯುವಕನೊಬ್ಬನ ಕೈಹಿಡಿದು ನೇತಾಡಿದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪುಣೆಯ ಸ್ವಾಮಿ ನಾರಾಯಣ ದೇವಾಲಯದ ಬಳಿಯ ಬಹುಮಹಡಿ ಕಟ್ಟಡದ ಮೇಲೇರಿದ ಈ ಜೋಡಿ ಈ ಸಾಹಸ ಮಾಡಿದೆ. ಯುವಕನ ಕೈಹಿಡಿದು ಕಟ್ಟಡದ ಮೇಲ್ಛಾವಣಿಯಿಂದ ಇಳಿಯುವ ಯುವತಿ, ನಂತರ ಅದೇ ಬಲದಲ್ಲಿ ನೇತಾಡುತ್ತಾಳೆ. ಇದನ್ನು ಯುವಕರು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿರುವುದು ಈ ವಿಡಿಯೋದಲ್ಲಿದೆ.
ಯುವಕ ಹಾಗೂ ಯುವತಿಯ ಗುರುತು ಪತ್ತೆಯಾಗಿಲ್ಲ. ಈ ದೃಶ್ಯ ಸೆರೆ ಹಿಡಿಯುವ ಸಲುವಾಗಿಯೇ ಕಟ್ಟಡದ ಹಲವೆಡೆ ಕ್ಯಾಮೆರಾಗಳನ್ನು ಇಡಲಾಗಿತ್ತು. ಒಬ್ಬರು ಮೇಲಿನಿಂದ ದೃಶ್ಯ ಸೆರೆಹಿಡಿಯುತ್ತಿದ್ದರೆ, ಮತ್ತೊಬ್ಬ ಕೆಳಗಿನಿಂದ ಮೊಬೈಲ್ನಲ್ಲಿ ಇದನ್ನು ದಾಖಲಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ, ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಈ ಸಾಹಸ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಇವರ ಈ ಸಾಹಸಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಗುಂಪಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆಟ್ಟಿಗರು ಆಗ್ರಹಿಸಿದ್ದಾರೆ. ಆದರೆ ಈ ಕುರಿತು ಯಾವುದೇ ದೂರು ದಾಖಲಾದ ಕುರಿತು ವರದಿಯಾಗಿಲ್ಲ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#Pune: For Creating Reels and checking the strength, Youngsters risk their lives by doing stunt on an abandoned building near Swaminarayan Mandir, Jambhulwadi Pune@TikamShekhawat pic.twitter.com/a5xsLjfGYi
— Punekar News (@punekarnews) June 20, 2024