2024-25ನೇ ಸಾಲಿನ ಅರಿವು ವಿದ್ಯಾಭ್ಯಾಸ ಸಾಲ ಯೋಜನೆ – ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನ

ಮಂಗಳೂರು/ಬೆಂಗಳೂರು: 2024-25ನೇ ಸಾಲಿನ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ನೀಟ್‌ ಮೂಲಕ ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ ಆಯುಷ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಗಳಿಗೆ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತಿದ್ದು ಆನ್ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜೂ.21ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು ಜು. 7 ಕೊನೆಯ ದಿನವಾಗಿರುತ್ತದೆ.

ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್‌, ಜೈನ, ಬೌದ್ಧ, ಸಿಖ್‌ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಈ ಯೋಜನೆಗಾಗಿ ಅರ್ಜಿ ಸಲ್ಲಿಸಬಹುದು.

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ನೀಟ್‌ ಮೂಲಕ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 5,00,000/- ಸಾಲವಾಗಿ ನೀಡಲಾಗುತ್ತದೆ.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ನೀಟ್‌ ಮೂಲಕ ಆಯ್ಕೆಯಾದ ಬಿ. ಡಿ. ಎಸ್, ಎಂ.ಡಿ.ಎಸ್ ಕೋರ್ಸುಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 1,00,000 ದವರೆಗೆ ಮತ್ತು ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 50,000 ವನ್ನು ನೀಡಲಾಗುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ., ನೀಟ್ ಮುಖಾಂತರ ಆಯ್ಕೆಯಾದ ಬ್ಯಾಚುಲರ್ ಆಫ್ ಆರ್ಕಿಟೆಕ್ಟ,ಇಂಜಿನಿಯರಿಂಗ್ ಟೆಕ್ನಾಲಜಿ ಬಿ.ಇ., ಬಿ.ಟೆಕ್, ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್ ವ್ಯಾಸಾಂಗ ಮಾಡುತ್ತಿರುವ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ, ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ  50,000 ರೂ ಗಳನ್ನು ನೀಡಲಾಗುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ., ನೀಟ್ ಮುಖಾಂತರ ಎಂ ಬಿ ಎ, ಎಂ ಸಿ ಎ, ಎಲ್ ಎಲ್ ಬಿ ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ರೂ.50,000/-ವನ್ನು ಸಾಲವಾಗಿ ನೀಡಲಾಗುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ, ನೀಟ್ ಮುಖಾಂತರ ಆಯ್ಕೆಯಾದ ಬಿಎಸ್ಸಿ ಹಾರ್ಟಿಕಲ್ಚರ್, ಅಗ್ರಿಕಲ್ಚರ್, ಡೈರಿ ಟೆಕ್ನಾಲಜಿ, ಪಾರೆಸ್ಟ್ರಿ, ವೆಟರ್ನರಿ, ಅನಿಮಲ್‌ ಸೈನ್ಸ್, ಫುಡ್‌ ಟೆಕ್ನಾಲಜಿ, ಬಯೋ ಟೆಕ್ನಾಲಜಿ, ಫಿಶರಿಸ್, ಸೆರಿಕಲ್ಚರ್, ಹೋಮ್ ಕಮ್ಯೂನಿಟಿ ಸೈನ್ಸ್, ಫುಡ್ ನ್ಯೂಟ್ರಿಶಿಯನ್ ಅಂಡ್ ಡಯಾಟಿಕ್ಸ್, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವಾಗಿ ರೂ.50,000/-ವನ್ನು ಸಾಲವಾಗಿ ನೀಡಲಾಗುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ, ನೀಟ್ ಮುಖಾಂತರ ಆಯ್ಕೆಯಾದ ಬಿ. ಫಾರ್ಮ್‌, ಎಂ.ಫಾರ್ಮ್, ಫಾರ್ಮ ಡಿ ಮತ್ತು ಡಿ.ಫಾರ್ಮ್ ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ  ರೂ.50,000/-ವನ್ನು ಸಾಲವಾಗಿ ನೀಡಲಾಗುವುದು.
  • ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 8,00,000/- ಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ 2% ಬಡ್ಡಿದರದೊಂದಿಗೆ ಮರುಪಾವತಿ ಮಾಡಬೇಕು.

ಅಧ್ಯಯನ ಪ್ರಮಾಣಪತ್ರ, ಕಾಲೇಜು ಶುಲ್ಕದ ವಿವರ, ಹಿಂದಿನ ವರ್ಷ ಪಾಸಾದ ಅಂಕಪಟ್ಟಿ, ಕಾಲೇಜು ಬ್ಯಾಂಕ್ ವಿವರಗಳು, ಭದ್ರತಾ ಠೇವಣಿ (ಸಾಲದ ಮೊತ್ತದ 12%) ಪಾವತಿ ಮಾಡಿದ ರಶೀದಿ, ಕೆಇಎ ದಾಖಲಾತಿ ಆದೇಶ ಪ್ರತಿ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಮತ್ತು ಅಲ್ಪಸಂಖ್ಯಾತ ಪ್ರಮಾಣಪತ್ರ, ಅರ್ಜಿ ಸಲ್ಲಿಸುವ ವೇಳೆ ಈ ದಾಖಲೆಗಳು ನಿಮ್ಮಲಿರಲಿ. ಆನ್‌ಲೈನ್ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಕೆಎಂಡಿಸಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Website ಲಿಂಕ್: https://kmdconline.karnataka.gov.in/Portal/home

 

LEAVE A REPLY

Please enter your comment!
Please enter your name here