ಕೇರಳದ ಮೊದಲ ವಿಮಾನಯಾನ ಸಂಸ್ಥೆ – ಶೀಘ್ರದಲ್ಲೇ “ಏರ್‌ ಕೇರಳ” ಸೇವೆ ಆರಂಭ

ಮಂಗಳೂರು/ಕೇರಳ: ಏರ್‌ ಕೇರಳ, ಝೆಟ್‌ಫ್ಲೈ ಏವಿಯೇಶನ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಹೊಸ ವಿಮಾನ ಸೇವೆ, ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯಾನುಮತಿಯನ್ನು ಪಡೆದುಕೊಂಡಿದೆ. ಮಲಯಾಳಿ ಉದ್ಯಮಿಗಳಾದ ಅಯೂಬ್ ಕಲ್ಲಡ ಮತ್ತು ಅಫಿ ಅಹಮ್ಮದ್ ಅವರೇ ಈ ಯೋಜನೆಯ ರೂವಾರಿಗಳು. ಏರ್‌ ಕೇರಳದ ಹೊಸ ಸೇವೆಯನ್ನು ದುಬೈನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಇದು ದಕ್ಷಿಣದ ರಾಜ್ಯ ಕೇರಳದ ಮೊದಲ ವಿಮಾನಯಾನ ಸಂಸ್ಥೆಯಾಗಲಿದೆ.

ಏರ್‌ ಕೇರಳ, ಕೇರಳದಲ್ಲಿ ಪ್ರವಾಸೋದ್ಯಮ, ವಾಣಿಜ್ಯೋದ್ಯಮವನ್ನು ಉತ್ತೇಜಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಂಸ್ಥೆಯು ಈ ಯೋಜನೆಯನ್ನು ಹಾಕಿಕೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. 1.1 ಬಿಲಿಯನ್ ದಿರ್ಹಾಮ್ ಪ್ರಾಥಮಿಕ ಹೂಡಿಕೆಯಿಂದ, ಪ್ರಾರಂಭದಲ್ಲಿ 2 ಟೈರ್ ಮತ್ತು 3 ಟೈರ್ ನಗರಗಳಿಗೆ ಮೂರು ಎಟಿಆರ್ 72-600 ವಿಮಾನಗಳನ್ನು ಬಳಸಿಕೊಂಡು ಅಗ್ಗದ ದರದಲ್ಲಿ ಗ್ರಾಹಕರಿಗೆ ಸೇವೆಗಳನ್ನು ನೀಡಲು ಕಂಪನಿಯ ಯೋಜನೆ ಹಾಕಿಕೊಂಡಿದೆ. ಭವಿಷ್ಯದಲ್ಲಿ ಅಂತರಾಷ್ಟ್ರೀಯ ಸೇವೆಗಳತ್ತ ವಿಸ್ತರಿಸಲು ಕಂಪನಿಯು ಯೋಜನೆ ಹಮ್ಮಿಕೊಂಡಿದೆ.

LEAVE A REPLY

Please enter your comment!
Please enter your name here