ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್​ – ಅಪಾಯದಿಂದ ಪಾರಾದ 30 ಬಸ್ ಪ್ರಯಾಣಿಕರು

ಮಂಗಳೂರು/ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಹೊತ್ತಿ ಉರಿದಿದೆ. ನಗರದ ಎಂ ಜಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಬಸ್​ನಲ್ಲಿ 30 ಜನ ಪ್ರಯಾಣಿಸುತ್ತಿದ್ದು ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.​ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಿಎಂಟಿಸಿ ಬಸ್​ ರೋಸ್​ ಗಾರ್ಡನ್​ನಿಂದ ಶಿವಾಜಿನಗರಕ್ಕೆ ಬರುತ್ತಿತ್ತು. ಮಾರ್ಗ ಮಧ್ಯೆ ಎಂ ಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್​ನಲ್ಲಿ ಚಾಲಕ ಬಸ್ ಬಂದ್​ ಮಾಡಿದ್ದರು. ಮತ್ತೆ ಸ್ಟಾರ್ಟ್ ಆಗಿಲ್ಲ. 2-3 ಸಲ ಸ್ಟಾರ್ಟ್ ಮಾಡಲು ಯತ್ನಿಸಿದ್ದಾರೆ. ಆದರೆ, ಸ್ಟಾರ್ಟ್​ ಆಗಲಿಲ್ಲ. ಈ ವೇಳೆ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬಸ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://x.com/DarshanDevaiahB/status/1810535277229670633

 

LEAVE A REPLY

Please enter your comment!
Please enter your name here