ಎಸ್‌ಎಸ್‌ಎ‌ಲ್ ಸಿ–2 ಪರೀಕ್ಷೆ – ಜಿಲ್ಲೆಯಲ್ಲಿ ಶೇ 37.90 ಫಲಿತಾಂಶ

ಮಂಗಳೂರು: ಎಸ್‌ಎಸ್‌ಎಲ್‌ಸಿ–2 ಪರೀಕ್ಷೆಯಲ್ಲಿ ಮಂಗಳೂರು ಶೈಕ್ಷಣಿಕ ಜಿಲ್ಲೆ ಶೇ 37.90 ಫಲಿತಾಂಶ ಗಳಿಸಿದ್ದು ಮೂಡುಬಿದಿರೆ ಬ್ಲಾಕ್‌ ಗರಿಷ್ಠ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ 1555 ವಿದ್ಯಾರ್ಥಿಗಳು ಮತ್ತು 582 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಒಟ್ಟು 810 ಮಂದಿ ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ ಪಾಸಾದವರಲ್ಲಿ 325 ಮಂದಿ ವಿದ್ಯಾರ್ಥಿನಿಯರು ಎಂದು ಡಿಡಿಪಿಐ ವೆಂಕಟೇಶ ಪಟಗಾರ ತಿಳಿಸಿದ್ದಾರೆ. ಮೂಡುಬಿದಿರೆ ಬ್ಲಾಕ್‌ನಲ್ಲಿ 116 ಮಂದಿ ಪರೀಕ್ಷೆ ಬರೆದಿದ್ದು 53 ಮಂದಿ ತೇರ್ಗಡೆ ಹೊಂದಿದ್ದಾರೆ. ಬಂಟ್ವಾಳ ಬ್ಲಾಕ್‌ನಲ್ಲಿ 470 ಮಂದಿ ಪರೀಕ್ಷೆ ಬರೆದಿದ್ದು ಅತಿ ಕಡಿಮೆ ಶೇ 28.51 ಮಂದಿ ತೇರ್ಗಡೆ ಹೊಂದಿದ್ದಾರೆ. 

ಪುತ್ತೂರು ಬ್ಲಾಕ್‌ನಲ್ಲಿ ಶೇ 45.15ರಷ್ಟು ಸಾಧನೆ ಆಗಿದೆ. ಪರೀಕ್ಷೆ ಬರೆದ 259 ವಿದ್ಯಾರ್ಥಿಗಳ ಪೈಕಿ 117 ಮಂದಿ ತೇರ್ಗಡೆ ಹೊಂದಿದ್ದಾರೆ. ಬಂಟ್ವಾಳ ಬ್ಲಾಕ್‌ನಲ್ಲಿ ಅತಿ ಕಡಿಮೆ ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 470 ಮಂದಿ ಪೈಕಿ 134 ಮಂದಿ ತೇರ್ಗಡೆ ಹೊಂದಿದ್ದಾರೆ. ಬೆಳ್ತಂಗಡಿ ಬ್ಲಾಕ್‌ನಲ್ಲಿ 207ರ ಪೈಕಿ 90 (ಶೇ 43.48), ಮಂಗಳೂರು ಉತ್ತರದಲ್ಲಿ 539ರ ಪೈಕಿ 223 (ಶೇ 41.37), ಮಂಗಳೂರು ದಕ್ಷಿಣದಲ್ಲಿ 397ರ ಪೈಕಿ 131 (ಶೇ33) ಮತ್ತು ಸುಳ್ಯದಲ್ಲಿ 149ರ ಪೈಕಿ 62 (ಶೇ 41.61) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

LEAVE A REPLY

Please enter your comment!
Please enter your name here