ಮುಂದುವರಿದ ಧರ್ಮದಂಗಲ್‌- ಜಾತ್ರೆಯಲ್ಲಿ ಅನ್ಯರಿಗಿಲ್ಲ ಅವಕಾಶ

ಮಂಗಳೂರು:ಕರಾವಳಿಯಲ್ಲಿ ಧರ್ಮದಂಗಲ್‌ ಮುಂದುವರಿದಿದ್ದು ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ವೇಳೆ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್‌ ಅಳವಡಿಸಲಾಗಿದೆ. ಸನಾತನ ಧರ್ಮದ ಆಚರಣೆ ಮತ್ತು ನಂಬಿಕೆಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ವಿಗ್ರಹಾರಾಧನೆ ಹರಾಂ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್‌ ನಲ್ಲಿ ಬರೆಯಲಾಗಿದೆ.ದೇವಸ್ಥಾನದ ಸುತ್ತಲೂ ಸಿ ಎ ಆರ್‌ ತುಕಡಿ ಸೇರಿದಂತೆ ಹೆಚ್ಚುವರಿ ಪೊಲೀಸ್‌ರನ್ನು ಭದ್ರತೆಗೆ ನೇಮಿಸಲಾಗಿದೆ. ಭಜರಂಗದಳದ ಕಾರ್ಯಕರ್ತರಿಗೆ ಸ್ಟಾಲ್‌ ಗಳ ನಿರ್ವಹಣೆ ಉಸ್ತುವಾರಿ ನೀಡಲಾಗಿದ್ದು ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ಬಹಿಷ್ಕಾರದ ನಿರ್ಧಾರ ಮಾಡಲಾಗಿದೆ.

ಇನ್ನೊಂದೆಡೆ , ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಉತ್ಸವಗಳಲ್ಲಿ ಅನ್ಯಮತೀಯರಿಗೆ ಅನುಮತಿ ನೀಡಿ ಈ ಹಿಂದೆ ಗಲಭೆ ಗೊಂದಲ ನಡೆದಿದ್ದು , ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅನ್ಯಮತೀಯರಿಗೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲೂ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ವಿಟ್ಲ ಪ್ರಖಂಡದ ಅಧ್ಯಕ್ಷ ಪದ್ಮನಾಭ ಕಟ್ಟೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here