ನೇಪಾಳ ವಿಮಾನ ಪತನ- ಮುಂದುವರಿದ ರಕ್ಷಣಾ ಕಾರ್ಯ

ನೇಪಾಳ: ನಾಲ್ಕು ಸಿಬ್ಬಂದಿ ಸೇರಿದಂತೆ 72 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಯೇತಿ ಏರ್‌ ಲೈನ್ಸ್‌ ವಿಮಾನ ರವಿವಾರ ಬೆಳಿಗ್ಗೆ ನೇಪಾಳದ ಪೋಖರಾ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ.ವಿಮಾನ, ಕಠ್ಮಂಡುವಿನಿಂದ ಪೋಖರಾಗೆ ಹೊರಟಿದ್ದು ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಗೆ ಸಮೀಪವಿದ್ದಾಗ ಸೇಟಿ ನದಿಯ ದಡದಲ್ಲಿ ಪತನಗೊಂಡಿದೆ. ಈಗಾಗಲೇ 32 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ. ವಿಮಾನ ಟೇಕ್‌ ಆಫ್‌ ಆದ 20ನಿ ನಂತರ ಈ ಘಟನೆ ನಡೆದಿದೆ.

ಪ್ರಯಾಣಿಕರ ಪೈಕಿ 4 ಮಂದಿ ಭಾರತೀಯರು ಎಂದು ತಿಳಿದುಬಂದಿದೆ. ಎಷ್ಟು ಜನ ಬದುಕಿಳಿದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಈವರೆಗೆ 32 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಯೇತಿ ಏರ್‌ ಲೈನ್ಸ್‌ ವಕ್ತಾರರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾದ್ಯತೆ ಇದೆ ಎನ್ನಲಾಗಿದೆ

LEAVE A REPLY

Please enter your comment!
Please enter your name here