ನೇಪಾಳ ವಿಮಾನ ದುರಂತ-5 ಭಾರತೀಯರ ಸಹಿತ 70 ಸಾವು

ನೇಪಾಳ:ನೇಪಾಳದ ಕಠ್ಮಂಡುವಿನಿಂದ ಪೊಖರಾಗೆ ಪ್ರಯಾಣಿಸುತ್ತಿದ್ದ ಯೇತಿ ಏರ್‌ಲೈನ್ಸ್‌ ಸಂಸ್ಥೆಗೆ ಸೇರಿದ ವಿಮಾನ ಪೊಖರಾದಲ್ಲಿ ಲ್ಯಾಂಡಿಗ್‌ ನ 5 ನಿಮಿಷಕ್ಕೆ ಮೊದಲು ಸೇಟಿ ನದಿಯ ತಟದಲ್ಲಿ ಪಥನಗೊಂಡಿದ್ದು ಸಿಬ್ಬಂದಿ ಸಹಿತ ವಿಮಾನದಲ್ಲಿದ್ದ 70 ಮಂದಿ ಸಾವನ್ನಪ್ಪಿದ್ದಾರೆ.ಇಬ್ಬರು ಬದುಕುಳಿದಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ನೋಡ ನೋಡುತ್ತಲೇ ನೆಲಕ್ಕಪ್ಪಳಿಸಿದ ವಿಮಾನ ಹೊತ್ತಿ ಉರಿದಿದೆ.

ಸಾವನ್ನಪ್ಪಿದವರ ಪೈಕಿ ಐವರು ಭಾರತೀಯರು ಸೇರಿದ್ದಾರೆ.ಇವರೆಲ್ಲರೂ ಮಹಾರಾಷ್ಟ್ರದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.ರಷ್ಯಾದ ನಾಲ್ವರು , ಜರ್ಮನಿಯ ಇಬ್ಬರು , ಕೊರಿಯಾದ ಇಬ್ಬರು,53 ನೇಪಾಳಿಗಳು , ಐರಶ್‌ ,ಅರ್ಜೆಂಟೈನಾ, ಪ್ರಾನ್ಸ್‌ ನ ಮೂರು ಪ್ರಯಾಣಿಕರು ಈ ನತದೃಷ್ಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ರಕ್ಷಣಾಪಡೆಯಿಂದ ಬ್ಲಾಕ್‌ ಬಾಕ್ಸ್‌ಗಾಗಿ ಹುಡುಕಾಟ ಮುಂದುವರಿದಿದೆ.

LEAVE A REPLY

Please enter your comment!
Please enter your name here