ಭರತ್‌ಪುರದಲ್ಲಿ ಪತನಗೊಂಡ ಚಾರ್ಟರ್ಡ್‌ ವಿಮಾನ

ಜೈಪುರ : ರಾಜಸ್ಥಾನದ ಭರತ್‌ ಪುರದಲ್ಲಿ ಚಾರ್ಟರ್ಡ್‌ ವಿಮಾನವೊಂದು ಪತನಗೊಂಡಿದೆ ತಾಂತ್ರಿಕ ದೋಷದಿಂದಾಗಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ವಿಮಾನ ಹಾರಾಡುತ್ತಿದ್ದಾಗಲೇ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ಬಹಳ ಸಮಯದ ನಂತರ ವಿಮಾನ ನೆಲಕ್ಕುರುಳಿದೆ. ಉಚೈನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಂಗೋರ ರೈಲ್‌ ನಿಲ್ದಾಣದ ಬಳಿ ವಿಮಾನ ಅಪಘಾತಕ್ಕೀಡಾಗಿದ್ದು ರಸ್ತೆಗಳು ಉತ್ತಮವಾಗಿಲ್ಲದ ಕಾರಣ ರಕ್ಷಣಾ ತಂಡದ ವಾಹನಗಳು ಘಟನಾ ಸ್ಥಳಕ್ಕೆ ತಲುಪಲು ತಡವಾಗಿದೆ. ಜಿಲ್ಲಾಧಿಕಾರಿ ಅಶೋಕ್‌ ರಂಜನ್‌, ಪೊಲೀಸ್ ಮತ್ತು ಸ್ಥಳೀಯಾಡಳಿತ ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳದಲ್ಲಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಲಭಿಸಬೇಕಿದೆ

LEAVE A REPLY

Please enter your comment!
Please enter your name here