ಕುಂಬ್ರ: ಜೀಪು-ಸ್ಕೂಟರ್ ಅಪಘಾತ, ಸ್ಕೂಟರ್ ಸವಾರಗೆ ಗಾಯ

ಪುತ್ತೂರು: ಜೀಪು ಮತ್ತು ಸ್ಕೂಟರ್ ನಡುವೆ ಕುಂಬ್ರ ಜಂಕ್ಷನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಫೆ.13 ರಂದು ಅಪರಾಹ್ನ ನಡೆದಿದೆ. ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಜೀಪು ಹಾಗೂ ಕೌಡಿಚ್ಚಾರ್‌ನಿಂದ ಕುಂಬ್ರಕ್ಕೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಕುಂಬ್ರ ಜಂಕ್ಷನ್‌ನಲ್ಲಿ ಸ್ಕೂಟರ್ ಸವಾರ ರಿಕ್ಷಾ ಪಾರ್ಕಿಂಗ್‌ಗೆ ತನ್ನ ಸ್ಕೂಟರ್ ಅನ್ನು ತಿರುಗಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಜೀಪುಗೆ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸವಾರನಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಡಿಕ್ಕಿಯನ್ನು ತಪ್ಪಿಸುವ ಭರದಲ್ಲಿ ಜೀಪು ಚಾಲಕ ತನ್ನ ವಾಹನವನ್ನು ರಸ್ತೆ ಬದಿಗೆ ಇಳಿಸಿದ್ದು ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೆ ಜೀಪು ತಾಗಿದ್ದು ಇದರಿಂದ ಮಹಿಳೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here