ಮೂಡಬಿದ್ರೆ- ಜಿ ಕೆ ಖ್ಯಾತಿಯ ಗಣೇಶ್‌ ಕಾಮತ್‌ ಇನ್ನಿಲ್ಲ

 

 

ಮೂಡಬಿದ್ರೆ: ಜಿ ಕೆ ಎಂದೇ ಖ್ಯಾತರಾಗಿದ್ದ ಇಲ್ಲಿನ ಜಿಕೆ ಎಂಟರ್‌ ಪ್ರೈಸಸ್‌ ಮಾಲಕ ಗಣೇಶ್‌ ಕಾಮತ್‌ ಮಾ.3ರಂದು ನಿಧನರಾಗಿದ್ದಾರೆ. ಮನೆಯಿಂದ ತಮ್ಮ ಕಛೇರಿಗೆ ತೆರಳುತ್ತಿದ್ದ ವೇಳೆ ಹೃದಯಘಾತಕ್ಕೊಳಗಾದ ಅವರನ್ನು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕಾರ್ಕಳದ ಗಾಂಧಿ ಮೈದಾನದಲ್ಲಿ ಡೇ ಆಂಡ್‌ ನೈಟ್‌ ಕ್ರಿಕೇಟ್‌ ಪಂದ್ಯಾಟಕ್ಕಾಗಿ ಲೈಟಿಂಗ್ಸ್‌ ಮಾಡುತ್ತಿದ್ದ ವೇಳೆ ವಿದುತ್‌ ಅಘಾತಕ್ಕೊಳಗಾಗಿದ್ದ ಗಣೇಶ್‌ ಕಾಮತ್‌ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಆ ಬಳಿಕ ಜೆಕೆ ಎಂಟರ್‌ ಪ್ರೈಸಸ್‌ ಉದ್ಯಮ ಪ್ರಾರಂಭಿಸಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here