ನಿರುದ್ಯೋಗ- ಖಿನ್ನತೆಗೊಳಗಾಗಿ ಮನೆ ತೊರೆದ ಯುವಕ

ಮಂಗಳೂರು: ಇಂಜಿನಿಯರಿಂಗ್ ಪದವೀಧರ ರಂಜಾಳ ಆಶಿಶ್ ಪ್ರಭು (24) ಎಂಬಾತ ಮಾ.5ರಂದು ಮನೆ ಬಿಟ್ಟು ಹೋಗಿದ್ದು, ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಆಶಿಶ್ ಪ್ರಭು ಕೆಲಸ ಸಿಗದೆ ಖಿನ್ನತೆಯಿಂದ ಬಳಲುತ್ತಿದ್ದು, ಕೆಲಸ ಹುಡುಕುವಂತೆ ತಂದೆ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗುವುದಾಗಿ ತಿಳಿಸಿ ಮೊಬೈಲ್ ಪೋನ್‌ನ್ನು ಮನೆಯಲ್ಲಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಸಾಧಾರಣ ಶರೀರ, ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ, 5.9 ಅಡಿ ಎತ್ತರ ಹೊಂದಿರುವ ಆಶಿಶ್ ಪ್ರಭು ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ. ಮಾಹಿತಿ ದೊರೆತಲ್ಲಿ ಕದ್ರಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here