ಮಂಗಳೂರು: ರಾಜ್ಯದಲ್ಲಿ ರಾಜ್ಯಪಾಲರಿಂದ ಪಕ್ಷಪಾತ ಧೋರಣೆ ನಡೆಯುತ್ತಿರುವ ಹಿನ್ನೆಲೆ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯಪಾಲರು ತರಾತುರಿ ನಿರ್ಧಾರ ಕೈಗೊಂಡಿದ್ದಾರೆ.ಕುಮಾರ ಸ್ವಾಮಿ ಅಧಿಕಾರ ಅವಧಿಯಲ್ಲಿ ಅವರ ವಿರುದ್ಧದ ಲೋಕಯುಕ್ತ ತನಿಖೆಗೆ ಕೇಳಿತ್ತು. ಮುರ್ಗೇಶ್ ನಿರಾನಿ, ಶಶಿಕಲಾ ಜೊಲ್ಲೆ ವಿರುದ್ಧ ತನಿಖೆಗೆ ರಾಜ್ಯಪಾಲರಲ್ಲಿ ಮನವಿ ಮಾಡಿದ್ರು. ಆದರೆ ಈ ಸಂಧರ್ಭದಲ್ಲಿ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ಕೇಳಿದ್ದು ಮೂರನೇ ವ್ಯಕ್ತಿ. ಯಾರೋ ಕೊಟ್ಟ ಅರ್ಜಿಗೆ ತಕ್ಷಣ ಸ್ಪಂದಿಸಿದ ರಾಜ್ಯಪಾಲರು ಈಗ ಯಾಕೆ ಸುಮ್ಮನೆ ಇದ್ದಾರೆ?. ಕುಮಾರ ಸ್ವಾಮಿ ವಿರುದ್ದ ಎಸ್ಐಟಿ ಈಗ ರಾಜ್ಯಪಾಲರಲ್ಲಿ ತನಿಖೆಗೆ ಅನುಮತಿ ಕೇಳಿದೆ. ಯಾಕೆ ರಾಜ್ಯಪಾಲರು ಈ ಬಗ್ಗೆ ಅನುಮತಿ ಕೊಡುತ್ತಿಲ್ಲ. ರಾಜ್ಯದಲ್ಲಿ ಇಂತಹಾ ಅನೇಕ ಕಡತಗಳು ಅನುಮತಿಗಾಗಿ ಕಾಯುತ್ತಾ ಇದೆ, ರಾಜ್ಯಪಾಲರು ಎಲ್ಲವನ್ನೂ ಕ್ಲೀಯರ್ ಮಾಡಲಿ.
ಕಾಂಗ್ರೆಸ್ ಪ್ರತಿಭಟನೆ ವೇಳೆ ಸಾರ್ವಜನಿಕ ಸ್ವತ್ತಿಗೆ ಹಾನಿ ಆದ ಬಗ್ಗೆ ವಿಷಾದವಿದೆ.ರಾಜ್ಯಾಧ್ಯಕ್ಷರು ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ರು. ಆದ್ರೆ ಕಾರ್ಯಕರ್ತರು ಆಕ್ರೋಶದಲ್ಲಿ ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿದ್ದಾರೆ ಎಂದು ಹೇಳಿದ ಅವರು ಐವನ್ ಡಿಸೋಜ ಮೇಲೆ ಪ್ರಕರಣ ದಾಖಲಿಗೆ ಬಿಜೆಪಿ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ, ಜಿಲ್ಲೆಯಲ್ಲಿ ಶಾಸಕರೊಬ್ಬರು ಠಾಣೆಗೆ ಕಾರ್ಯಕರ್ತರೊಂದಿಗೆ ನುಗ್ಗಿ ಪೋಲಿಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದರು. ಪೊಲೀಸ್ ಇಲಾಖೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಳೀನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದರು.ಭರತ್ ಶೆಟ್ಟಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸ್ತೇನೆ ಎಂದಿದ್ದರು. ಇವರಷ್ಟು ಕೀಳು ಮಟ್ಟಕ್ಕೆ ನಮ್ಮ ನಾಯಕರು ಕಾರ್ಯಕರ್ತರು ಹೋಗಿಲ್ಲ. ಯಾವುದೇ ಠಾಣೆಗೆ ನುಗ್ಗಲು ನಮ್ಮ ಕಾರ್ಯಕರ್ತರು ಹೋಗಿಲ್ಲ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.