ಹಸು ಕಳವು, ದರೋಡೆ ಗ್ಯಾಂಗ್‌ ಅಂದರ್- ಬಜ್ಪೆ ಪೊಲೀಸರ ಕಾರ್ಯಾಚರಣೆ

ಮಂಗಳೂರು: ಮಂಗಳೂರು ಮತ್ತು ಚಿಕ್ಕಮಗಳೂರಿನ ಕೆಲವೆಡೆ ಹಸು ಕಳವು ಮಾಡುತ್ತಿದ್ದ ಅಂತರಾಜ್ಯ ಗೋ ಕಳ್ಳರ ಗ್ಯಾಂಗ್ ವೊಂದನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಗಂಜಿಮಠದ ನಿವಾಸಿ ಇರ್ಷಾದ್ ಮತ್ತು ಕೇರಳ ಮಂಜೇಶ್ವರ ನಿವಾಸಿ ಇರ್ಪಾನ್ ಬಂಧಿತ ಆರೋಪಿಗಳು. ಮದ್ದಡ್ಕ ಪಾರೂಕ್ ಎಂಬಾತನು ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.

ಮಾ.6 ರಂದು ಬೆಳಗ್ಗಿನ ಜಾವ ಪೊಲೀಸರು ಅಣ್ಣೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ.ಕ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿದೆಡೆ ಕಾರುಗಳಲ್ಲಿ ತೆರಳಿ ಹಸುಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಮತ್ತು ಕಳವಿಗಾಗಿ ಉಪಯೋಗಿಸುತ್ತಿದ್ದ ಮಹೇಂದ್ರ  XYLO ಕಾರು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮಿತ್ತೂರು ಎಂಬಲ್ಲಿಂದ 6 ದನಗಳನ್ನು ಮತ್ತು 2021ರಲ್ಲಿ ಬಡಗ, ಎಡಪದವು , ದಡ್ಡಿಯಿಂದ ಎರಡು ಹಸುಗಳನ್ನು ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ದ ಬಜಪೆ, ಕೊಣಾಜೆ, ಕಾವೂರು, ಮೂಡಬಿದ್ರೆ, ಮಂಗಳೂರು ಉತ್ತರ, ಪುಂಜಾಲಕಟ್ಟೆ, ಬಂಟ್ವಾಳ ನಗರ , ಬಣಕ್ಕಲ್‌ , ಬಸವನಹಳ್ಳಿ, ಮತ್ತು ಚಿಕ್ಕಮಗಳೂರು ಠಾಣೆಯಲ್ಲಿ ದನ ಕಳವು ಮತ್ತು ದರೋಡೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ತಪ್ಪಿಸಿ ಕೊಂಡ ಮದ್ದಡ್ಕ ಫಾರೂಕ್‌ ನ ಬಂಧನಕ್ಕೆ ಬಲೆ ಬೀಸಲಾಗಿದೆ.

LEAVE A REPLY

Please enter your comment!
Please enter your name here