ಮಂಗಳೂರು: ಲೈಂಗಿಕ ಕಿರುಕುಳ ಹಾಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಕೇರಳ ಮೂಲದ ಜುವೆಲ್ಲರಿ ಸಂಸ್ಥೆಯೊಂದರ ಮ್ಯಾನೇಜರ್ ನನ್ನು ಕದ್ರಿ ಪೊಲೀಸರು ಮಾ.7ರ ಮಂಗಳವಾರ ಬಂಧಿಸಿದ್ದಾರೆ.
ಕಾಸರಗೋಡಿನ ಮೊಗ್ರಾಲ್ ಟಿವಿಎಸ್ ರೋಡ್ ನಿವಾಸಿ ಮುಹಮ್ಮದ್ ಕುಂಞಿ(52) ಬಂಧಿತ ಆರೋಪಿಯಾಗಿದ್ದು, ಕಾಸರಗೋಡಿನಲ್ಲಿ ಜುವೆಲ್ಲರಿ ಸಂಸ್ಥೆಯೊಂದರ ಮ್ಯಾನೇಜರ್. ಜುವೆಲ್ಲರಿ ಅಂಗಡಿ ಮಾಲೀಕರ ಸಂಬಂಧಿಯಾಗಿರುವ ಈತನ್ನು ಕಾಸರಗೋಡಿನಲ್ಲಿ ಬಂಧಿಸಿದ ಮಂಗಳೂರು ಕದ್ರಿ ಪೊಲೀಸರು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.