ತರಕಾರಿ ವ್ಯಾಪಾರಿಯ ಖಾತೆಗೆ 172 ಕೋಟಿ ಜಮೆ

ನವದೆಹಲಿ: ತರಕಾರಿ ಮಾರಾಟಗಾರನೊಬ್ಬನ ಖಾತೆಗೆ 172 ಕೋಟಿ ರೂಪಾಯಿ ಜಮೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿಜಯ್‌ ರಸ್ತೋಗಿ ಎಂಬವರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿದ್ದು ಅವರ ಕುಟುಂಬ ಮಾತ್ರ ಒತ್ತಡದಲ್ಲಿದೆ.

ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳು ತನಿಖೆಗಾಗಿ ಆಗಾಗ ಮನೆಗೆ ಬರುತ್ತಿದ್ದಾರೆ ಎಂದು ರಸ್ತೋಗಿ ಹೇಳಿದ್ದಾನೆ. ಬ್ಯಾಂಕ್‌ ಖಾತೆ ಮತ್ತು ಹಣ ನನಗೆ ಸೇರಿದ್ದಲ್ಲ ಎಂದು ರಸ್ತೋಗಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದು, ತನಿಖೆ ಮುಂದುವರಿದಿದೆ. ಒಂದು ತಿಂಗಳ ಹಿಂದೆ ಅಕ್ರಮ ಹಣ ವರ್ಗಾವಣೆ ಪಟ್ಟಿಯಲ್ಲಿ ರಸ್ತೋಗಿ ಹೆಸರಿರುವುದನ್ನು ಗಮನಿಸಿದ್ದು ಪ್ರಕರಣವನ್ನು ಸೈಬರ್‌ ಕ್ರೈಂ ಸೆಲ್ ಗೆ ವರ್ಗಾಯಿಸಲಾಗಿದೆ. 

LEAVE A REPLY

Please enter your comment!
Please enter your name here