ತಿಲಕವನ್ನು ನಿಷೇಧಿಸುತ್ತೀರಾ? ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ – ಮುಂಬೈ ಕಾಲೇಜಿನಲ್ಲಿ ಹಿಜಾಬ್ ನಿಷೇಧಕ್ಕೆ ತಾತ್ಕಾಲಿಕ ತಡೆ

ಮಂಗಳೂರು (ನವದೆಹಲಿ): ಹಿಜಾಬ್, ನಿಖಾಬ್, ಬುರ್ಖಾ, ಟೋಪಿ ಮತ್ತು ಅಂತಹುದೇ ಉಡುಪನ್ನು ಧರಿಸುವುದನ್ನು ನಿಷೇಧಿಸಿ ಮುಂಬೈಯ ಕಾಲೇಜೊಂದು ಹೊರಡಿಸಿದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಆದರೆ, ತರಗತಿಯೊಳಗೆ ಹುಡುಗಿಯರು ಬುರ್ಖಾ ಧರಿಸಲು ಮತ್ತು ಕ್ಯಾಂಪಸ್ನಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠವು ಧಾರ್ಮಿಕ ಚಿಹ್ನೆಗಳ ಮೇಲಿನ ಕಾಲೇಜಿನ ಆಯ್ದ ನಿಷೇಧವನ್ನು ಪ್ರಶ್ನಿಸಿದ್ದು, ಏಕರೂಪದ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವ ಉದ್ದೇಶವಿದ್ದರೆ ತಿಲಕ ಮತ್ತು ಬೊಟ್ಟಿನಂತಹ ಧರ್ಮದ ಇತರ ಗುರುತುಗಳಿಗೆ ನಿಷೇಧವನ್ನು ಏಕೆ ವಿಸ್ತರಿಸಿಲ್ಲ ಎಂದು ಪ್ರಶ್ನಿಸಿದೆ.

ಹುಡುಗಿಯರು ತಾವು ಧರಿಸುವ ಬಟ್ಟೆಯಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿರಬೇಕು ಮತ್ತು ಕಾಲೇಜು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಪೀಠ ಹಿಜಾಬ್‌ ಮತ್ತು ಟೋಪಿ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಕಾಲೇಜುಗಳು ಇಂತಹ ನಿಯಮ ಮಾಡುವುದನ್ನು ನಿಲ್ಲಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ತಿಲಕ ಅಥವಾ ಬೊಟ್ಟು ಧರಿಸಿರುವ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ನಿರ್ಬಂಧಿಸಲಾಗುತ್ತದೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಇದು ಯಾವುದೇ ಸೂಚನೆಯ ಭಾಗವಲ್ಲ. ನೀವದನ್ನು ಹೇಳಿಲ್ಲವಲ್ಲ ಎಂದು ಪೀಠ  ಅಂಥ ಪ್ರಶ್ನೆ ಮಾಡಲಾಗಿದೆ ಎಂದು ಲೈವ್ ಲಾ ವರದಿ ತಿಳಿಸಿದೆ.

LEAVE A REPLY

Please enter your comment!
Please enter your name here