ಅಣ್ಣಾಮಲೈ ವಿರುದ್ದ ಆಕ್ರೋಶ – ಎಐಎಡಿಎಂಕೆ ಸೇರಿದ ಬಿಜೆಪಿ ನಾಯಕರು

ಚೆನ್ನೈ: ಮಾಜಿ ಐಪಿಎಸ್‌ ಅಧಿಕಾರಿಯಾಗಿರುವ ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ವಿರುದ್ದ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.

ಪರಿಣಾಮ ಬಿಜೆಪಿಯ 13 ಪದಾಧಿಕಾರಿಗಳು ಏಕಕಾಲದಲ್ಲಿ ಪಕ್ಷ ತೊರೆದು ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. ಮೈತ್ರಿ ಪಕ್ಷವಾದ ಎಐಎಡಿಎಂಕೆ ಸೇರಿರುವ ಎಲ್ಲರೂ ಪಶ್ಚಿಮ ಚೆನ್ನೈನ ಬಿಜೆಪಿ ಐಟಿ ಸೆಲ್‌ ಪದಾಧಿಕಾರಿಗಳಾಗಿದ್ದಾರೆ. ಈ ನಡುವೆ ತಮಿಳುನಾಡು ಬಿಜೆಪಿ ಘಟಕ ಎಡಪ್ಪಾಡಿ ಪಳನಿ ಸ್ವಾಮಿ ನೇತೃತ್ವದ ಎಐಎಡಿಎಂಕೆ ತಮ್ಮ ನಾಯಕರನ್ನು ಖರೀದಿಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಐಟಿ ಜಿಲ್ಲಾಧ್ಯಕ್ಷ ಅನ್ಬರಸನ್‌ ಬಿಜೆಪಿ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದೆ ಇದರಿಂದ ಅಸಮರ್ಪಕ ಬೆಳವಣಿಗೆಗಳಾಗುತ್ತಿದ್ದು, ಪಕ್ಷ ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇತ್ತಿಚೀನ ದಿನಗಳಲ್ಲಿ ಸಾಕಷ್ಟು ನಾಯಕರು ಮತ್ತು ಕಾರ್ಯ ಕರ್ತರು ಬಿಜೆಪಿ ತೊರೆದು ಎಐಎಡಿಎಂಕೆ ಸೇರ್ಪಡೆಯಾಗಿದ್ದು ಪಕ್ಷದೊಳಗೆ ಅಣ್ಣಾಮಲೈ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. 

LEAVE A REPLY

Please enter your comment!
Please enter your name here