ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮನೆ ಮನೆಗೆ ಹಂಚಿದ್ದ ಸೀರೆಗೆ ಬೆಂಕಿ ಹಚ್ಚಿ ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರಹಳ್ಳಿಯಲ್ಲಿ ಗ್ರಾಮಸ್ಥರೊಬ್ಬರು ಬಿಜೆಪಿ ವಿತರಿಸಿದ ಸೀರೆಗೆ ಬೆಂಕಿ ಹಚ್ಚುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೋಟು ಹಾಕಿ ಗೆಲ್ಲಿಸಿದ್ದೇವೆ, ಊರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ನನ್ನ ಹೆಂಡತಿ, ತಾಯಿಗೆ ಸೀರೆ ಕೊಟ್ಟಿದ್ದಾರೆ. ಇದೇ ನಮಗೆ ನೀಡಿರುವ ಸೌಲಭ್ಯ. ಈ ಸೌಲಭ್ಯ ಬಿಟ್ಟರೆ ಬೇರೆ ಏನೂ ಕೊಟ್ಟಿಲ್ಲ ಎಂದು ಗ್ರಾಮಸ್ಥ ಯೋಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
A voter burnt sarees allegedly distributed by supporters of #BJP Mla CT Ravi complaining that they want overall development of constituency. Education for their children. And they won’t be enticed by a saree ahead of elections. #Chikkamagaluru #Karnataka #KarnatakaElection2023 pic.twitter.com/D2MSTSBmq6
— Imran Khan (@KeypadGuerilla) March 9, 2023