ಹುಬ್ಬಳ್ಳಿ: ಯುವತಿಗೆ ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಹುಬ್ಬಳಿಗೆ ಆಕೆಯನ್ನು ಕರೆಸಿಕೊಂಡ ಯುವಕನೋರ್ವ ತನ್ನ ಗೆಳೆಯರ ಜೊತೆ ಸೇರಿಕೊಂಡು ಸಾಮಾಹಿಕ ಅತ್ಯಾಚಾರ ಮಾಡಿದ ಘಟನೆ ಹುಬ್ಬಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳಿಯ ಶೇರುವಾಡ್ ತಾಲೂಕಿನ ನಿವಾಸಿಗಳಾದ ಪರಿಚಯಸ್ಥ ದೇವರಾಜ್, ಫಕ್ಕಿರೇಶ ಸೇರಿ ನಾಲ್ವರು ಅತ್ಯಾಚಾರ ಎಸಗಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 8ರಂದು ದೇವರಾಜ್ ಮೊಬೈಲ್ ಕೊಡಿಸುವ ಆಮಿಷವೊಡ್ಡಿ ಹುಬ್ಬಳ್ಳಿಗೆ ಕರೆಯಿಸಿ ಕೊಂಡಿದ್ದ. ನಗರ ಸುತ್ತಾಡಿಸಿ ಖಾಸಗಿ ಹೋಟೆಲೊಂದಕ್ಕೆ ಕರೆತಂದ ದೇವರಾಜ್ ತನ್ನ ಸ್ನೇಹಿತನ ಜೊತೆ ಸೇರಿ ನನಗೆ ಹಲ್ಲೆ ಮಾಡಿದ್ದಾನೆ, ಬಳಿಕ ಬೈಕ್ ಮೇಲೆ ಹುಬ್ಬಳ್ಳಿ ಬೈಪಾಸ್ ರಿಂಗ್ ರೋಡ್‌ನ ಬ್ರಿಡ್ಜ್ ಬಳಿಗೆ ಕರೆದುಕೊಂಡು ಹೋಗಿ ಇಬ್ಬರು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ. ನಂತರ ತನ್ನ ಮತ್ತಿಬ್ಬರು ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದ ದೇವರಾಜ್, ಅವರಿಂದಲೂ ಅತ್ಯಾಚಾರ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.