ಅಜ್ಜಿಯನ್ನು ರಕ್ಷಿಸಿದ ಮೊಮ್ಮಗಳು – ವಿಡಿಯೋ ವೈರಲ್

ರಾತ್ರಿ 8.30ರ ವೇಳೆ 60ರ ಇಳಿ ವಯಸ್ಸಿನ ಅಜ್ಜಿಯೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಪುಣೆಯ ಶಿವಾಜಿನಗರದಲ್ಲಿರುವ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿದ್ದ ಅಪರಿಚಿತ ಸ್ಕೂಟರ್ ಸವಾರನೊಬ್ಬ ವಿಳಾಸ ಕೇಳುವ ನೆಪದಲ್ಲಿ ಅಜ್ಜಿಯ ಕೊರಳಲ್ಲಿದ್ದ ಚಿನ್ನದ ಸರ ಎಗರಿಸಲು ಕತ್ತಿಗೆ ಕೈಹಾಕಿದ್ದ. ಈ ವೇಳೆ ಅಜ್ಜಿ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ದಿಢೀರ್ ಆಗಿ ಮೊಮ್ಮಗಳು ಕೈಯಲ್ಲಿದ್ದ ವಸ್ತುವಿನಿಂದ ಅಪರಿಚಿತ ಕಳ್ಳನ ಮುಖಕ್ಕೆ ಸತತವಾಗಿ ಹೊಡೆದಿದ್ದಾಳೆ. ಅಜ್ಜಿಯು ತನ್ನ ಕೈಯ್ಯಲ್ಲಿದ್ದ ಚೀಲದಿಂದ ಬಲವಾಗಿ ಹೊಡೆದಾಗ ಕಳ್ಳ ಸ್ಕೂಟರ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.  ಘಟನೆಯ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ 10 ವರ್ಷದ ಮೊಮ್ಮಗಳು ಅಜ್ಜಿಯ ಜೀವ ಮತ್ತು ಸರವನ್ನು ಕಾಪಾಡಿದ್ದು ನಾಗರಿಕ ಸಮಾಜದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here