ಅಪೂರ್ಣ ಹೆದ್ದಾರಿ ಲೋಕಾರ್ಪಣೆ ಮೂಲಕ 25 ಸಾವಿರ ಕೋಟಿ ಟೋಲ್ ಸಂಗ್ರಹಿಸುವುದೇ ಬಿಜೆಪಿ ಗುರಿ

ಬೆಂಗಳೂರು : ಭ್ರಷ್ಟ ಬಿಜೆಪಿ ಸರಕಾರ ಮುಂಬರುವ ಚುನಾವಣೆಯಲ್ಲಿ ಅವನತಿಯತ್ತ ಸಾಗುತ್ತಿರುವ ಹಿನ್ನಲೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಪೂರ್ಣ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈ ವೇ ಯನ್ನು ಉದ್ಘಾಟನೆ ಮಾಡುತ್ತಿದೆ.

ಈ ಮೂಲಕ ಸಾರ್ವಜನಿಕರ ಜೀವವನ್ನು ಪಣಕ್ಕಿಟ್ಟು ಅವರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮೋದಿ ಸರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಮೂಲಕ 25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ ಎಂದು ಆರೋಪಿಸಿದ್ದಾರೆ. 

LEAVE A REPLY

Please enter your comment!
Please enter your name here