ಜೆ.ಇ.ಇ ಮೈನ್ಸ್ 2 – 2025 ಪ್ರವೇಶ ಪರೀಕ್ಷೆ :
- ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ
- ಗಳ ಅತ್ಯುತ್ತಮ ಸಾಧನೆ
ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆ.ಇ.ಇ ಮೈನ್ಸ್-2025 ರ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಹನ್ ಕೆ.ಎಲ್ (ಪುತ್ತೂರು – ಸುಳ್ಯಪದವಿನ ಲಕ್ಷ್ಮಣ್ ಕೆ ಹಾಗೂ ನಿರ್ಮಲಾ ಕೆ.ಎ ದಂಪತಿಗಳ ಪುತ್ರ) 99.28 ಪರ್ಸೆಂಟೈಲ್ನೊಂದಿಗೆ ರಾಷ್ಟ್ರ ಮಟ್ಟದಲ್ಲಿ 2545 ನೇ ರಾಂಕ್ ಪಡೆದಿರುತ್ತಾರೆ. ಜತೆಗೆ ನಾಲ್ವರು ವಿದ್ಯಾರ್ಥಿಗಳು ಮುಂದೆ ನಡೆಯಲಿರುವ JEE Advanced ಪ್ರವೇಶ ಪರೀಕ್ಷೆಯನ್ನು ಎದುರಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ಅತ್ಯುತ್ತಮ ಅಂಕಗಳನ್ನು (ಪರ್ಸೆಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ.
ಆಶಿಶ್ ಎಸ್.ಜಿ 96.61 ಪರ್ಸೆಂಟೈಲ್ (ಬೆಳ್ತಂಗಡಿ ತಾಲೂಕಿನ ಕೆ. ಶ್ಯಾಮರಾಜ ಶರ್ಮ ಹಾಗೂ ಗಂಗಾವೇಣಿ ದಂಪತಿಗಳ ಪುತ್ರ.) , ತನ್ಮಯ್ ಕೃಷ್ಣ ಜಿ.ಎಸ್ 95.73 ಪರ್ಸೆಂಟೈಲ್ (ನೇರಳಕಟ್ಟೆಯ ಗೋಪಾಲಕೃಷ್ಣ ಎನ್ ಹಾಗೂ ಸ್ವಪ್ನಾ ಎನ್ ದಂಪತಿಗಳ ಪುತ್ರ.) ,ತೇಜಚಿನ್ಮಯ ಹೊಳ್ಳ 93.81 ಪರ್ಸೆಂಟೈಲ್ (ಎಸ್ ಹರೀಶ್ ಹೊಳ್ಳ ಹಾಗೂ ಸುಚಿತ್ರಾ ಎನ್ ದಂಪತಿಗಳ ಪುತ್ರ.) , ಅಭಿರಾಮ ಭಟ್ 92.21 ಪರ್ಸೆಂಟೈಲ್ (ಪಡ್ನೂರಿನ ನಾರಾಯಣ ಪ್ರಸಾದ್ ಪಿ. ಎಸ್ ಹಾಗೂ ರಮ್ಯಾ ಕಾವೇರಿ ದಂಪತಿಗಳ ಪುತ್ರ.), ಅಭಿಷೇಕ್ ಡಿ ಭಟ್ 91.95 ಪರ್ಸೆಂಟೈಲ್ (ಕುಮಟಾದ ದತ್ತಾತ್ರೇಯ ನಾರಾಯಣ ಭಟ್ ಹಾಗೂ ಸಾವಿತ್ರಿ ಡಿ ಭಟ್ ದಂಪತಿಗಳ ಪುತ್ರ) ಪಡೆದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
- ಸಹನ್ ಕೆ.ಎಲ್
- ಆಶಿಶ್ ಎಸ್.ಜಿ
- ತನ್ಮಯ್ ಕೃಷ್ಣ ಜಿ.ಎಸ್
- ತೇಜಚಿನ್ಮಯ ಹೊಳ್ಳ
- ಅಭಿರಾಮ ಭಟ್
- ಅಭಿಷೇಕ್ ಡಿ ಭಟ್