ಮಂಗಳೂರು: ಬೆಂಗಳೂರು – ಮೈಸೂರು ಹೆದ್ದಾರಿಯು ದಶಪಥ ರಸ್ತೆಯಲ್ಲ . ವಾಸ್ತವದಲ್ಲಿ ಇದು ಕೇವಲ ಆರು ಪಥದ ರಸ್ತೆಯಾಗಿದೆ. ಅಷ್ಟಕ್ಕೇ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಾಸ್ತವದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಈ ಯೋಜನೆಯಲ್ಲಿ ಇಲ್ಲ. ಆದರೆ ಜನರ ಹಿತ ದೃಷ್ಟಿಯಿಂದ ತಲಾ ಎರಡು ಪಥಗಳ ಸರ್ವಿಸ್ ರಸ್ತೆ ನಿರ್ಮಾಣ ಮಾಡಿ ನಿರ್ವಹಣೆಯನ್ನು ಮಾಡುತ್ತಿದ್ದೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಹೇಳಿದ್ದಾರೆ.
ಮಾ 15 ರಂದು ಕಣಮಿಣಕಿ ಟೋಲ್ ಬಳಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಅಪೂರ್ಣ ಸರ್ವಿಸ್ ರಸ್ತೆ ಕಾಮಗಾರಿಯನ್ನು ಸಮರ್ಥಿಸಿಕೊಂಡು ಎಲ್ಲರೂ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಿದರೆ ಟೋಲ್ ಕಟ್ಟುವವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಟಿಯ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ