ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ

ಮಂಗಳೂರು : ಶೋಕಕ್ಕೆ ಒಳಗಾದ ಮಹಿಳೆಯೊಬ್ಬರು ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಇಡುಕ್ಕಿಯ ಉಪ್ಪುಪಾರದ ಕೈತಪಾಟಲ್ ನಲ್ಲಿ ನಡೆದಿದೆ. 38 ವರ್ಷದ ಮಹಿಳೆ ಲಿಜಿ ಮತ್ತು 7 ವರ್ಷ ಪ್ರಾಯದ ಬೆನ್ ಟಾಮ್ ಮೃತ ದುರ್ದೈವಿಗಳು. ಲಿಜಿ ಅವರ 28 ದಿನದ ನವಜಾತ ಶಿಶು ಎದೆ ಹಾಲು ಕುಡಿಯುವ ವೇಳೆ ಉಸಿರುಗಟ್ಟಿ ಹಿಂದಿನ ಡಿನ ಮೃತ ಪಟ್ಟಿದ್ದು ಅದೇ ದುಃಖದಲ್ಲಿ ಇದ್ದರೆನ್ನಲಾಗಿದೆ. ಮನೆಯವರು ಪ್ರಾರ್ಥನೆ ಸಲ್ಲಿಸಲು ಚರ್ಚ್ ಗೆ ಹೋಗಿದ್ದ ವೇಳೆ ಮಗನೊಂದಿಗೆ ಮನೆಯಲ್ಲಿ ಉಳಿದಿದ್ದ ಲಿಜಿ ದುಃಖ ತಡೆಯಲಾರದೆ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಚರ್ಚ್ ನಿಂದ ತಿರುಗಿ ಬಂದ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ತಾಯಿ ಮಗನ ಮೃತ ದೇಹ ಪತ್ತೆಯಾಗಿದೆ.

 

 

LEAVE A REPLY

Please enter your comment!
Please enter your name here