ಮಂಗಳೂರು: ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದ ಮಂಗಳೂರಿನ ಜನತೆಗೆ ಇಂದು ಮುಂಜಾನೆ ಸುರಿದ ಮೊದಲ ಮಳೆ ಕೊಂಚ ತಂಪು ತಂದಿದೆ.
ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸುರಿದಿದ್ದು, ಇಂದು ಮುಂಜಾನೆ ಮಂಗಳೂರಿನಲ್ಲಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿದಿದೆ. ಇನ್ನು ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಏಕಾಎಕಿ ಸುರಿದ ಮಳೆಯಿಂದ ನಗರದಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಒಟ್ಟಿನಲ್ಲಿ ಏರುತ್ತಿರುವ ತಾಪಮಾನವನ್ನು ಮಳೆ ಕೊಂಚ ಇಳಿಸಿದೆ. ಮಳೆ ಬೇಕೆಂದಾಗ ಬರುವುದಿಲ್ಲ, ಬೇಡವೆಂದಾಗ ನಿಲ್ಲುವುದೂ ಇಲ್ಲ. ಹೀಗಾಗಿ ಮಳೆ ಕವಿತೆಯಂತೆ, ಪ್ರೇಯಸಿಯ ಮುನಿಸಿನಂತೆ.