ಮಂಗಳೂರು: ಮುಂಬೈಯ ವೈದ್ಯರು ಎರಡೂ ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ತೋಳುಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡೂ ಕೈಗಳನ್ನು ಕಳೆದುಕೊಂಡಿದ್ದ ರಾಜಸ್ಥಾನ ಅಜ್ಮೀರ್ ಮೂಲದ ಪ್ರೇಮ್ ರಾವ್ (33)ಎಂಬ ವ್ಯಕ್ತಿಗೆ ವೈದ್ಯರು ಯಶಸ್ವಿಯಾಗಿ ತೋಳುಗಳ ಕಸಿ ಮಾಡುವ ಮೂಲಕ ಎರಡೂ ಕೈಗಳನ್ನು ಜೋಡಿಸಿದ್ದಾರೆ. ಇದು ಏಷ್ಯಾ ದಲ್ಲಿಯೇ ಮೊದಲ ಯಶಸ್ವಿ ಪ್ರಯತ್ನವಾಗಿದ್ದು, ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಮೈಲಿಗಲ್ಲು ಎನ್ನಬಹುದಾದ ಈ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿನ ತಜ್ಞ ವೈದ್ಯರ ತಂಡವು ನಿರಂತರವಾಗಿ 16 ಗಂಟೆಗಳ ಕಾಲ ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ.