ಸುಖವೀವ ಸುರಪಾನ ಅಬಕಾರಿ ವಶಕ್ಕೆ

    ಮಂಗಳೂರು: ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ ಮತ್ತು ಮಂಗಳೂರಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ, ತಯಾರಿಕೆ ಮತ್ತು ದಾಸ್ತಾನು ಚಟುವಟಿಕೆ ನಡೆಸುತ್ತಿದ್ದ ಕೇಂದ್ರಗಳಿಗೆ ಮಾರ್ಚ್ 6 ರಿಂದ 20 ರ ವರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಸಹಿತ ಐದು ವಾಹನ ಮತ್ತು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಂಟ್ವಾಳ ತಾಲೂಕಿನಲ್ಲಿ 23,400 ಲೀ ಬಿಯರ್, 16 ಲೀ ಕಳ್ಳ ಭಟ್ಟಿ, ಎರಡು ವಾಹನ, ಬೆಳ್ತಂಗಡಿ ತಾಲೂಕಿನಲ್ಲಿ 4,140 ಲೀ ಮದ್ಯ, 20ಲೀ ಶೇಂದಿ, 1 ವಾಹನ, ಸುಳ್ಯ ತಾಲೂಕಿನಲ್ಲಿ 9450 ಲೀ ಮದ್ಯ, ಮೂಡಬಿದ್ರೆ ತಾಲೂಕಿನಲ್ಲಿ 8640 ಲೀ ಮದ್ಯ, ಪುತ್ತೂರು ತಾಲೂಕಿನಲ್ಲಿ 14170 ಲೀ ಮಧ್ಯ ಮತ್ತು 2 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ.

    LEAVE A REPLY

    Please enter your comment!
    Please enter your name here