ಅಧಿಕ ಹೂಡಿಕೆ, ಅಧಿಕ ಲಾಭ – ವಂಚಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ

    ಮಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದೆಂದು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿ ಪಂಗನಾಮ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಮಂಗಳೂರು ಸಿ ಸಿ ಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಕೇರಳದ ಮಲಪುರಂ ನ ಚಕ್ಕರಕೋಡಿ ನಿವಾಸಿ ಹಂಝ ಎಂದು ಗುರುತಿಸಲಾಗಿದೆ. ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಿ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದೆಂದು ನಂಬಿಸಿ ಮಂಗಳೂರಿನ ಕಣ್ಣೂರು ನಿವಾಸಿ ಸೇರಿದಂತೆ ಹಲವರಿಂದ ಹೂಡಿಕೆ ಮಾಡಿಸಿ 25% ಲಾಭ ನೀಡುವುದಾಗಿ ಹೇಳಿ ಈತ ವಂಚಿಸಿದ್ದ.

    LEAVE A REPLY

    Please enter your comment!
    Please enter your name here