ಮಂಗಳೂರು: ಕಾಪು ಶರತ್ ಶೆಟ್ಟಿ ಕೊಲೆಯಾಗಿ ತಿಂಗಳುಗಳು ಕಳೆದಿದ್ದರೂ ಇನ್ನೂ ದುಷ್ಕರ್ಮಿಗಳ ಬಂಧನವಾಗಿಲ್ಲ. ಕಾಪು ಪೊಲೀಸರು ಕೊಲೆಗಡುಕರ ಪತ್ತೆಗೆ ಹಲವು ತರದಲ್ಲಿ ಬಲೆ ಬೀಸಿದ್ದು ಹತ್ಯೆ ಮಾಡಿದವರ ಯಾವುದೇ ಸುಳಿವು ಸಿಕ್ಕಿಲ್ಲ.
ಇದೀಗ ಶರತ್ ಕುಟುಂಬಸ್ಥರು ಕೊಲೆಗಡುಕರ ಪತ್ತೆಗಾಗಿ ದೈವದ ಮೊರೆ ಹೋಗಿದ್ದಾರೆ. ಹತ್ಯಾರಿಗಳ ಪತ್ತೆಯಾಗಬೇಕೆಂಬ ಸಂಕಲ್ಪದೊಂದಿಗೆ ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿ ನೇಮವನ್ನು ಆಯೋಜಿಸಲಾಗಿದೆ. ನೇಮದ ಸಂದರ್ಭದಲ್ಲಿ ಕೊಲೆಗೆ ನ್ಯಾಯ ಕೇಳಿದ್ದು, ದೈವವು, ಯಾವ ರೀತಿ ಶರತ್ ಶೆಟ್ಟಿ ಸಾಯುವಂತಾಯಿತೋ ಅದೇ ರೀತಿ ಅವರನ್ನೂ ಸರ್ವ ನಾಶ ಮಾಡುತ್ತೇನೆ, ಕೊಲೆಗಡುಕರು ಪಾತಾಳದಲ್ಲಿ ಅಡಗಿ ಕುಳಿತ್ತಿದ್ದರೂ ಸರಿ ಅವರನ್ನು ಹುಡುಕುವುದಾಗಿ ಪಂಜುರ್ಲಿ ದೈವ ಅಭಯ ನೀಡಿದೆ.