ಮಂಗಳೂರು: ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ವಿಧಿಸಲಾಗಿದ್ದ ಗಡುವನ್ನು ಕೇಂದ್ರ ಸರಕಾರ ಮುಂದೂಡಿದೆ.
ಜೂನ್ 30ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು ಜುಲೈ 1ರಿಂದ ಲಿಂಕ್ ಕಡ್ಡಾಯವೆಂದು ಕೇಂದ್ರ ಹಣಕಾಸು ಇಲಾಖೆ ಸೂಚನೆ ನೀಡಿದೆ. ಕಾಲಾವಕಾಶ ನೀಡಿಯೂ ಲಿಂಕ್ ಮಾಡದಿದ್ದಲ್ಲಿ 1000 ರೂ. ದಂಡ ವಿಧಿಸುವುದಾಗಿ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.