ದಾಖಲೆಗಳಿಲ್ಲದೆ ಹಣ ಪೊಲೀಸ್ ವಶಕ್ಕೆ

ಮಂಗಳೂರು: ನಗರದ ರಥಬೀದಿಯಲ್ಲಿ ಕಾರೊಂದನ್ನು ತಡೆದು ನಿಲ್ಲಿಸಿದ ಸಿಸಿಬಿ ಪೊಲೀಸರು ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ 3,23,600 ರೂ ನಗದು ವಶ ಪಡಿಸಿಕೊಂಡಿದ್ದಾರೆ.


ವಿಚಾರಣೆ ವೇಳೆ ಕಾರು ಚಾಲಕ, ಬಂಟ್ವಾಳದ ಅಮ್ಮುoಜೆ ಮೂಡಾಯಿ ಕೋಡಿ ನಿವಾಸಿ ಹಝೀಮ್ (21) ತನ್ನ ಚಿಕ್ಕಪ್ಪ ಇಸ್ಮಾಯಿಲ್ ಎಂಬವರು ತಿಳಿಸಿರುವಂತೆ ರಥಬೀದಿಯ ಚಿನ್ನದ ಅಂಗಡಿಯೊಂದರಿಂದ ಈ ಹಣವನ್ನು ಪಡೆದು ಅವರ ಪತ್ನಿಗೆ ನೀಡುವಂತೆ ಹೇಳಿದ್ದಾರೆ. ಅದರಂತೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಹಣ, ಕಾರು, ಮೊಬೈಲ್ ವಶಕ್ಕೆ ಪಡೆದಿದ್ದು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here